ಏಕಾಂತ ಅತ್ಯಂತ ದಾಸ್ಯೈಕರತಿಃ – ಎಂಪೆರುಮಾನರ ಸಂತೋಷಕ್ಕಾಗಿ ಸೇವಕತ್ವವನ್ನು ಇಚ್ಛಿಸುವವನು ಪರಮೈಕಾಂತಿ ತತ್ಪದಮ್ – ಎಂಪೆರುಮಾನರ ಪಾದಕಮಲಗಳು ಆಪ್ನುಯಾತ್ – ತಲುಪುವರು ಇದಮ್ ಶಾಸ್ತ್ರಮ್ – ಈ ಗೀತಾ ಸಂಗ್ರಹಮ್ ತತ್ ಪ್ರಧಾನಮ್ – ಜೀವಾತ್ಮನನ್ನು ಪರಮೈಕಾಂತಿಯನ್ನಾಗಿ ಪರಿವರ್ತನೆ ಮಾಡಲು ಮುಖ್ಯ ಉದ್ದೇಶವನ್ನು ಹೊಂದಿ ಇತಿ – ಈ ರೀತಿಯಲ್ಲಿ ಗೀತಾರ್ಥ ಸಂಗ್ರಹಃ – ಭಗವದ್ಗೀತೆಯ ಅರ್ಥಗಳನ್ನು ಸಂಕ್ಷಿಪ್ತಗೊಳಿಸಿ ವಿವರಿಸಿರುವ ‘ಗೀತಾರ್ಥ ಸಂಗ್ರಹಮ್’ ಮುಕ್ತಾಯವಾಗುತ್ತದೆ.
ಸರಳ ವಿವರಣೆ
ಎಂಪೆರುಮಾನರ ಸಂತೋಷಕ್ಕಾಗಿ , ಎಂಪೆರುಮಾನರಿಗೆ ಸೇವೆಯನ್ನು ಸಲ್ಲಿಸಲು ಆಸೆ ಪಡುವವನು ಪರಮೈಕಾಂತಿ. ಅವನು ಎಂಪೆರುಮಾನರ ಪಾದಕಮಲಗಳನ್ನು ಅವರಿಗೆ ಸೇವೆ ಸಲ್ಲಿಸಲು ತಲುಪುವನು. ಜೀವಾತ್ಮನನ್ನು ಈ ರೀತಿಯಲ್ಲಿ ಪರಮೈಕಾಂತಿಯನ್ನಾಗಿ ಪರಿವರ್ತನೆ ಮಾಡಲು ಮುಖ್ಯ ಉದ್ದೇಶವನ್ನು ಹೊಂದಿರುವ ಭಗವದ್ಗೀತೆಯ ಅರ್ಥಗಳನ್ನು ಸಂಕ್ಷಿಪ್ತವಾಗಿ ವಿವರಿಸಿರುವ ‘ಗೀತಾರ್ಥ ಸಂಗ್ರಹಮ್ ‘ ಪರಿಪೂರ್ಣವಾಗುತ್ತದೆ.
ಆಳವಂದಾರ್ ರವರು ರಚಿಸಿರುವ ಗೀತಾರ್ಥ ಸಂಗ್ರಹಮ್ನ ಕನ್ನಡ ಅನುವಾದ ಮುಕ್ತಾಯವಾಗುತ್ತದೆ. ಆೞ್ವಾರ್ ತಿರುವಡಿಗಳೇ ಶರಣಮ್ ಆಳವಂದಾರ್ ತಿರುವಡಿಗಳೇ ಶರಣಮ್ ಎಂಪೆರುಮಾನಾರ್ ತಿರುವಡಿಗಳೇ ಶರಣಮ್ ಜೀಯರ್ ತಿರುವಡಿಗಳೇ ಶರಣಮ್
ಪರಮೈಕಾಂತೀ ಜ್ಞಾನೀ ತು – ಭಗವಂತನಿಗೇ ಪೂರ್ತಿಯಾಗಿ ಭಕ್ತನಾಗಿರುವ ಜ್ಞಾನಿ ತದಾ ಯತ್ತಾತ್ಮ ಜೀವನಃ – ಎಂಪೆರುಮಾನರ ಮೇಲೆಯೇ ಪೂರ್ತಿಯಾಗಿ ಅವಲಂಬಿಸಿರುವ ಜೀವನವನ್ನು ಹೊಂದಿದ್ದು ತದೇಕಾಧೀಃ – ಅವರ ಪೂರ್ತಿ ಜ್ಞಾನವು ಭಗವಂತನಲ್ಲಿ ಮಾತ್ರ ಹೊಂದಿದ್ದು ತತ್ – ಸಂಶ್ಲೇಷ – ವಿಯೋಗೈಕ ಸುಕದುಕ್ಕ – ಭಗವಂತನಲ್ಲಿ ಸೇರಿದಾಗ ಅತ್ಯಂತ ಸಂತೋಷಗೊಂಡು
ಸರಳ ವಿವರಣೆ
ಭಗವಂತನಿಗೇ ಪೂರ್ತಿ ಭಕ್ತನಾಗಿರುವುದು ಜ್ಞಾನಿ . ಅವರ ಜೀವನ ಪೂರ್ತಿ ಭಗವಂತನ ಮೇಲೆಯೇ ಅವಲಂಬಿಸಿರುತ್ತದೆ. ಅವನು ಭಗವಂತನಲ್ಲಿ ಸೇರಿದಾಗ ಅತ್ಯಂತ ಸಂತೋಷಗೊಂಡು ಮತ್ತು ಭಗವಂತನಿಂದ ದೂರವಾದಾಗ ದುಃಖಗೊಳ್ಳುತ್ತಾನೆ. ಅವನ ಜ್ಞಾನ (ಅರಿವು) ಪೂರಾ ಭಗವಂತನಲ್ಲಿ ಮಾತ್ರ ನಾಟಿರುತ್ತದೆ.
ತಿರುವಾಯ್ಮೊೞಿ 6.7.1 ರಲ್ಲಿ ನಮ್ಮಾೞ್ವಾರರು ಘೋಷಿಸಿದ್ದಾರೆ –“ಉಣ್ಣುಮ್ ಸೋರು ಪರುಗು ನೀರ್ ತಿನ್ನುಮ್ ವೆಟ್ರಿಲೈಯುಮ್ ಎಲ್ಲಾಮ್ ಕಣ್ಣನ್” (ತಿನ್ನುವ ಆಹಾರ, ಕುಡಿಯುವ ನೀರು, ಅಡಿಕೆ ಬೀಜಗಳು – ಉಳಿಸಿಕೊಳ್ಳುವಿಕೆ, ಪೋಷಣೆ, ಮತ್ತು ಆನಂದ ಎಲ್ಲವೂ ಕೃಷ್ಣನೇ ಎಂದು ಹೇಳಿದ್ದಾರೆ).
ಭಗವತ್ ಧ್ಯಾನ ಯೋಗ ಉಕ್ತಿ ವಂದನ ಸ್ತುತಿ ಕೀರ್ತನೈಃ – ಭಗವಂತನನ್ನೇ ಧ್ಯಾನಿಸುವುದು (ಸ್ಮರಿಸುವುದು) , ನೋಡುವುದು, ಅವನ ಬಗ್ಗೆ ಮಾತನಾಡುವುದು, ಪೂಜಿಸುವುದು, ಹೊಗಳುವುದು, ಅವನ ಮೇಲೆಯೇ ಹಾಡುವುದು. ಲಬ್ಧಾತ್ಮಾ – ಯಾರೊಬ್ಬರು ತಮ್ಮನ್ನು ತಾವು ಉಳಿಸಿಕೊಳ್ಳುವರೋ ತತ್ ಗತ ಪ್ರಾಣ ಮನೋ ಬುದ್ಧಿ ಇಂದ್ರಿಯ ಕ್ರಿಯಃ – ಯಾರೊಬ್ಬರ ಜೀವನ. ಮನಸ್ಸು, ಬುದ್ಧಿ , ಇಂದ್ರಿಯಗಳು ಮತ್ತು ಕ್ರಿಯೆಗಳು ಭಗವಂತನ ಮೇಲೆಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವರೋ
ಸರಳ ವಿವರಣೆ
ಭಗವಂತನನ್ನು ಧ್ಯಾನಿಸುವುದು (ಸ್ಮರಿಸುವುದು), ನೋಡುವುದು, ಅವನ ಬಗ್ಗೆ ಮಾತನಾಡುವುದು, ಪೂಜಿಸುವುದು, ಹೊಗಳುವುದು, ಅವನ ಮೇಲೆ ಕೀರ್ತನೆಗಳನ್ನು ಹಾಡುವುದು – ಇವುಗಳ ಮೂಲಕ ಯಾರು ತನ್ನನ್ನು ತಾನು ಉಳಿಸಿಕೊಳ್ಳುವನೋ , ಅವನ ಜೀವನ, ಮನಸ್ಸು, ಬುದ್ಧಿ, ಇಂದ್ರಿಯಗಳು ಭಗವಂತನಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು.
ನಿಜ ಕರ್ಮಾದಿ – ಕರ್ಮಯೋಗದಿಂದ ಪ್ರಾರಂಭಿಸಿ (ಅವರವರ ವರ್ಣ ಮತ್ತು ಆಶ್ರಮಕ್ಕನುಗುಣವಾಗಿ) ಭಕ್ತಿ ಅಂತಮ್ – ಭಕ್ತಿಯೋಗದವರೆಗಿನ ಎಲ್ಲಾ ದಾರಿಗಳೂ ಉಪಾಯತಾಮ್ ಪರಿತ್ಯಜ್ಯ – ಭಗವಂತನನ್ನು ಪದೆಯಲು ತಮ್ಮ ಮನೋಭಾವದ ದಾರಿಯನ್ನು ಬಿಟ್ಟು ಪ್ರೀತ್ಯಾ ಏವಕಾರಿತಃ – ಭಕ್ತಿಯಿಂದ ಭಗವಂತನನ್ನು ಪ್ರಚೋದಿಸಿದಾಗ (ಎಲ್ಲರಿಗೂ ಸಹಜವಾದ ನಾಯಕನಾದ ಭಗವಂತನಿಗೆ ಅದೇ ಸೂಕ್ತವಾದುದು) ಕುರ್ಯಾತ್ – (ಪರಮೈಕಾಂತಿಯಾದ ಜ್ಞಾನಿ – ಯಾರು ಭಗವಂತನಲ್ಲಿ ಪರಿಪೂರ್ಣವಾಗಿ ಮನಸ್ಸಿಟ್ಟಿರುತ್ತಾರೋ) ಅವರು ಮಾಡುವ ಕ್ರಿಯೆ ಅಭೀಃ – ಭಯವಿಲ್ಲದೆ ತಾಮ – ಉಪಾಯತ್ವಮ್ (ದಾರಿಯಾಗಿರುವುದು) ದೇವೇ ತು – ಭಗವಂತನಲ್ಲಿ ಮಾತ್ರ ನ್ಯಾಸ್ಯೇತ್ – ಧ್ಯಾನಿಸಲ್ಪಡಬೇಕಾದ
ಸರಳ ವಿವರಣೆ
ಪರಮೈಕಾಂತಿಯಾದ ಜ್ಞಾನಿ (ಭಗವಂತನಲ್ಲೇ ಸಂಪೂರ್ಣವಾಗಿ ಮುಳುಗಿರುವ) ಭಕ್ತಿಯಿಂದ ಭಗವಂತನನ್ನು ಪ್ರಚೋದಿಸಿದಾಗ (ಸಹಜವಾಗಿ ಎಲ್ಲರಿಗೂ ನಾಯಕನಾಗಿರುವ ಭಗವಂತನಿಗೆ ಇದೇ ಸೂಕ್ತವಾದುದು) . ಅವನು ಕರ್ಮಯೋಗದಿಂದ ಪ್ರಾರಂಭಿಸಿ , ಭಕ್ತಿಯೋಗದವರೆಗೂ ಎಲ್ಲಾ ಮಾರ್ಗಗಳನ್ನೂ ಅನುಸರಿಸಿ, ತನ್ನ ವರ್ಣ ಮತ್ತು ಆಶ್ರಮಕ್ಕೆ ಅನುಗುಣವಾಗಿ , ಈ ಎಲ್ಲಾ ಯೋಗಗಳೂ, ಮಾರ್ಗಗಳೂ ಭಗವಂತನನ್ನು ಹೊಂದಲು ಮಾರ್ಗವಾಗಿದೆ ಎಂಬ ಮನೋಭಾವವನ್ನು ತ್ಯಜಿಸಿರುತ್ತಾನೆ. ಆ ಉಪಾಯತ್ವಮ್ (ಭಗವಂತನನ್ನು ಪಡೆಯುವ ದಾರಿ) ಭಯವನ್ನು ಬಿಟ್ಟು , ಭಗವಂತನನ್ನು ಮಾತ್ರ ಧ್ಯಾನಿಸುವುದೇ ಆಗಿರುತ್ತದೆ.