ಗೀತಾರ್ಥ ಸಂಗ್ರಹಮ್ – 4

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಗೀತಾರ್ಥ ಸಂಗ್ರಹಮ್

<< ಹಿಂದಿನ ಶೀರ್ಷಿಕೆ

ಎರಡನೆಯ ಷಟಕದಲ್ಲಿರುವ ಅಧ್ಯಾಯಗಳ ಸಾರಾಂಶ


ಶ್ಲೋಕ – 11

ಸ್ವಯಾತಾತ್ಮ್ಯಮ್ ಪ್ರಕೃತ್ಯಾಸ್ಯ ತಿರೋಧಿಃ ಶರಣಾಗತಿಃ ।
ಭಕ್ತ ಭೇದಾಃ ಪ್ರಬುದ್ಧಸ್ಯ ಶ್ರೇಷ್ಠ್ಯಂ ಸಪ್ತಮ ಉಚ್ಯತೇ ॥

Nammazhwar
ನಮ್ಮಾೞ್ವಾರ್ – ಜ್ಞಾನಿಗಳಲ್ಲೆಲ್ಲಾ ಶ್ರೇಷ್ಠವಾದ ಜ್ಞಾನಿ

ಕೇಳಿ

ಪದದಿಂದ ಪದಗಳ ಅರ್ಥ

ಸಪ್ತಮೇ – ಏಳನೆಯ ಅಧ್ಯಾಯದಲ್ಲಿ
ಸ್ವಯಾಥಾತ್ಮ್ಯಮ್ – ಪರಮಪುರುಷನ ನಿಜವಾದ ಸ್ವರೂಪ (ಭಗವಂತನೇ ಭಕ್ತಿಗೆ ವಸ್ತು)
ಪ್ರಕೃತ್ಯಾ -ಮೂಲ ಪ್ರಕೃತಿಯ ಜೊತೆ
ಅಸ್ಯ ತಿರೋಧಿಃ – ಆ ಜೀವಾತ್ಮದ ಜ್ಞಾನಕ್ಕೆ ಮುಸುಕೆಳೆದಂತಾಗಿದೆ
ಶರಣಾಗತಿಃ – ಶರಣಾಗತಿ
ಭಕ್ತ ಭೇದಃ – ನಾಲ್ಕು ವಿಧದ ಭಕ್ತರು
ಪ್ರಬುದ್ಧಸ್ಯ ಸ್ರೈಷ್ಟ್ಯಮ್ – ಜ್ಞಾನಿಯ ಶ್ರೇಷ್ಠತೆ (ಆ ನಾಲ್ಕು ವಿಧದ ಭಕ್ತರಲ್ಲಿ)
ಉಚ್ಯತೇ – ಹೇಳಿದ್ದಾರೆ.

ಸರಳ ವಿವರಣೆ

ಏಳನೆಯ ಅಧ್ಯಾಯದಲ್ಲಿ ಪರಮ ಪುರುಷನ ನಿಜ ಸ್ವರೂಪ , ಭಗವಂತನೇ ಉಪಾಸನೆಯ ವಸ್ತು, ಜೀವಾತ್ಮಗಳಿಗೆ ಭಗವಂತನ ವಿಷಯದಲ್ಲಿ ಮುಸುಕೆಳೆದಂತಾಗಿರುವುದು, ಭಗವಂತನಿಗೆ ಶರಣಾದರೆ ಆ ಮುಸುಕು ತೆರೆಯಲ್ಪಡುವುದು, ನಾಲ್ಕು ರೀತಿಯ ಭಕ್ತರು, ಮತ್ತು ಅವರಲ್ಲಿ ಜ್ಞಾನಿಯ ಶ್ರೇಷ್ಠತೆ ಇದೆಲ್ಲವನ್ನೂ ವಿವರಿಸಿದ್ದಾರೆ.

ಶ್ಲೋಕ – 12

ಐಶ್ವರ್‍ಯಾಕ್ಷರಯಾತಾತ್ಮ್ಯ ಭಗವಚ್ಚರಣಾರರ್ಥಿನಾಮ್ ।
ವೇದ್ಯೋಪಾಧೇಯಭಾವಾನಾಮ್ ಅಷ್ಟಮೇ ಭೇದ ಉಚ್ಯತೇ ।।

paramapadhanathan
ಆತ್ಯಂತ ಶ್ರೇಷ್ಠವಾದ ಗುರಿಯೆಂದರೆ ಪರಮಪದದಲ್ಲಿ ಭಗವಂತನಿಗೆ ಸೇವೆ ಸಲ್ಲಿಸುವುದು

ಕೇಳಿ


ಪದದಿಂದ ಪದಗಳ ಅರ್ಥ

ಐಶ್ವರ್‍ಯ ಅಕ್ಷರ ಯಾತಾತ್ಮ್ಯ ಭಗವಚ್ಚರಣಾರರ್ಥಿನಾಮ್ – ಮೂರು ರೀತಿಯ ಭಕ್ತರಲ್ಲಿ ಐಶ್ವರ್‍ಯಾರ್ಥಿ – ಯಾರು ಈ ಲೌಕಿಕ ಐಶ್ವರ್‍ಯಕ್ಕಾಗಿ ಆಸೆಪಡುತ್ತಾರೋ , ಕೈವಲ್ಯಾರ್ಥಿ – ತನ್ನಲ್ಲಿ ತಾನೇ ಆನಂದವಾಗಿ ಇರಲು ಬಯಸುವವನು, ಈ ದೇಹದಿಂದ ಮುಕ್ತನಾದವನು, ಜ್ಞಾನಿ – ಭಗವಂತನ ಪಾದ ಕಮಲವನ್ನು ಸೇರುವ ಇಚ್ಛೆಯುಳ್ಳವನು
ವೇದ್ಯ ಉಪಾದೇಯ ಭಾವಾನಾಮ್ – ಕಟ್ಟಳೆಗಳು ಮತ್ತು ಅವುಗಳನ್ನು ಅರ್ಥಮಾಡಿಕೊಂಡು ಪಾಲಿಸಬೇಕಾದುದು
ಭೇದಮ್ – ವಿವಿಧ ರೀತಿಯ
ಅಷ್ಟಮೇ – ಎಂಟನೆಯ ಅಧ್ಯಾಯದಲ್ಲಿ
ಉಚ್ಯತೇ – ಹೇಳಿದ್ದಾರೆ

ಸರಳ ವಿವರಣೆ

ಎಂಟನೆಯ ಅಧ್ಯಾಯದಲ್ಲಿ ವಿವಿಧ ರೀತಿಯ ಕಟ್ಟಳೆಗಳನ್ನು ಮತ್ತು ಅವುಗಳನ್ನು ಅರ್ಥಮಾಡಿಕೊಂಡು ಪಾಲಿಸುವ ಮೂರು ಭಕ್ತರ ವಿಧಗಳನ್ನು ,ಅವು – ಐಶ್ವರ್‍ಯಾರ್ಥಿ – ಯಾರು ಈ ಲೌಕಿಕ ಸಂಪತ್ತಿಗಾಗಿ ಆಸೆ ಪಡುವರೋ, ಕೈವಲ್ಯಾರ್ಥಿ – ಈ ಲೌಕಿಕ ದೇಹದಿಂದ ಸಂಪೂರ್ಣವಾಗಿ ಮುಕ್ತರಾಗಿ ಯಾರು ತಮ್ಮಲ್ಲಿ ತಾವೇ ಆನಂದ ಪಡುವರೋ, ಜ್ಞಾನಿ – ಭಗವಂತನ ಪಾದಕಮಲಗಳನ್ನು ಸೇರಲು ಬಯಸುವವನು, ಇವನ್ನೆಲ್ಲಾ ವಿವರಿಸಲಾಗಿದೆ.

ಶ್ಲೋಕ – 13

ಸ್ವಮಹಾತ್ಮ್ಯಮ್ ಮನುಷ್ಯತ್ವೆ ಪರತ್ವಮ್ ಚ ಮಹಾತ್ಮಾನಾಮ್ ।
ವಿಶೇಷೋ ನವಮೇ ಯೋಗೋ ಭಕ್ತಿರೂಪಃ ಪ್ರಕೀರ್ತಿತಃ ॥

world-in-krishna-mouth
ಕೃಷ್ಣನು ತನ್ನ ತಾಯಿಗೆ ಬಾಯಿಯಲ್ಲೇ ಬ್ರಹ್ಮಾಂಡವನ್ನೆಲ್ಲಾ ತೋರಿಸುತ್ತಿರುವುದು

ಕೇಳಿ

ಪದದಿಂದ ಪದಗಳ ಅರ್ಥ

ಸ್ವಮಾಹಾತ್ಮ್ಯಮ್ – ತನ್ನ ಸ್ವತಃ ಶ್ರೇಷ್ಠತೆ
ಮನುಷ್ಯತ್ವೇ ಪರತ್ವಮ್ – ಮನುಷ್ಯನ ರೂಪದಲ್ಲೇ ಶ್ರೇಷ್ಠತೆಯನ್ನು ಪಡೆದವನು
ಮಹಾತ್ಮಾನಾಮ್ ವಿಶೇಷಃ – ಮಹಾತ್ಮರಾದ ಜ್ಞಾನಿಗಳ ಶ್ರೇಷ್ಠತೆ (ಇವುಗಳೊಂದಿಗೆ ಶ್ರೇಷ್ಠವಾದ ಆತ್ಮ)
ಭಕ್ತಿರೂಪ ಯೋಗಃ – ಭಕ್ತಿಯೋಗವೆಂದು ಕರೆಯಲ್ಪಡುವ ಉಪಾಸನೆ

ನವಮೇ – ಒಂಭತ್ತನೆಯ ಅಧ್ಯಾಯದಲ್ಲಿ
ಪ್ರಕೀರ್ತಿತಃ – ಚೆನ್ನಾಗಿ ವಿವರಿಸಲಾಗಿದೆ

ಸರಳ ವಿವರಣೆ

ಒಂಭತ್ತನೆಯ ಅಧ್ಯಾಯದಲ್ಲಿ, ಅವನ ತನ್ನದೇ ಆದ ಶ್ರೇಷ್ಠತೆ, ಮನುಷ್ಯನ ರೂಪದಲ್ಲಿದ್ದಾಗಲೂ ಇರುವ ಅತ್ಯುನ್ನತೆ, ಇವುಗಳೊಂದಿಗೆ ಮಹಾತ್ಮರೆಂದು ಕರೆಯಲ್ಪಡುವ ಜ್ಞಾನಿಗಳ ಶ್ರೇಷ್ಠತೆ (ಶ್ರೇಷ್ಠ ಆತ್ಮಗಳು) ಮತ್ತು ಭಕ್ತಿಯೋಗವೆಂದು ಕರೆಯಲ್ಪಡುವ ಉಪಾಸನೆ – ಇವುಗಳನ್ನು ಚೆನ್ನಾಗಿ ವಿವರಿಸಲಾಗಿದೆ.

ಶ್ಲೋಕ – 14

ಸ್ವಕಲ್ಯಾಣಗುಣಾನಂತ್ಯಕೃತ್ಸ್ನಸ್ವಾಧೀನತಾಮತಿಃ ।
ಭಕ್ತ್ಯುತ್ಪತ್ತಿ ವಿವೃಧ್ಯಾರ್ಥಾ ವಿಸ್ತೀರ್ಣಾ ದಶಮೋದಿತಾ ॥

bhagavan

ಕೇಳಿ

ಪದದಿಂದ ಪದಗಳ ಅರ್ಥ

ಭಕ್ತಿ ಉತ್ಪತ್ತಿ ವಿವೃದ್ಧಿ ಅರ್ಥಾ – ಸಾಧನಾ ಭಕ್ತಿಯನ್ನು ಸ್ಥಾಪಿಸಿ ಪೋಷಿಸುವುದು [ಭಕ್ತಿಯೋಗ ಪ್ರಕ್ರಿಯೆಯ ಮಾಧ್ಯಮದಿಂದ ಭಗವಂತನನ್ನು ಪಡೆಯುವುದು]
ಸ್ವಕಲ್ಯಾಣಗುಣ ಅನಂತ್ಯ ಕೃತ್ಸ್ನ ಸ್ವಾಧೀನತಾ ಮತಿಃ – ಅಸಂಖ್ಯವಾದ ಅಮಿತವಾದ ಅವನ ಸ್ವರೂಪವಾದ ಕಲ್ಯಾಣಗುಣಗಳನ್ನು, ಮತ್ತು ಎಲ್ಲವನ್ನೂ ನಿಯಂತ್ರಿಸುವ ಅವನನ್ನು ಅರಿತಿರುವುದು
ವಿಸ್ತೀರ್ಣ – ವಿವರವಾಗಿ/ವಿಸ್ತೀರ್ಣವಾಗಿ
ದಶಮೋಧಿತ – ಹತ್ತನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ

ಸರಳ ವಿವರಣೆ

ಸಾಧನಾ ಭಕ್ತಿಯನ್ನು ಸ್ಥಾಪಿಸಿ ಪೋಷಿಸುವುದು [ಭಕ್ತಿಯೋಗ ಪ್ರಕ್ರಿಯೆಯ ಮಾಧ್ಯಮದಿಂದ ಭಗವಂತನನ್ನು ಪಡೆಯುವುದು] ಅಮಿತವಾದ ಭಗವಂತನ ಕಲ್ಯಾಣ ಗುಣಗಳು , ಎಲ್ಲವನ್ನೂ ನಿಯಂತ್ರಿಸುವ ಅವನನ್ನು ಅರಿಯುವುದು – ಈ ಎಲ್ಲವನ್ನೂ ವಿವರವಾಗಿ ಹತ್ತನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಶ್ಲೋಕ – 15

ಏಕಾದಶೇ ಸ್ವಯಾತಾತ್ಮ್ಯ ಸಾಕ್ಷಾತ್ಕಾರಾವಲೋಕನಮ್ ।
ದತ್ತಮುಕ್ತಂ ವಿಧಿ ಪ್ರಾಪ್ತ್ಯೋರ್ಭಕ್ತ್ಯೇಕೋಪಾಯತಾ ತಥಾ ॥

viswarupam

ಕೇಳಿ

ಪದದಿಂದ ಪದಗಳ ಅರ್ಥ

ಏಕಾದಶೇ – ಹನ್ನೊಂದನೆಯ ಅಧ್ಯಾಯದಲ್ಲಿ
ಸ್ವಯಾತಾತ್ಮ್ಯ ಸಾಕ್ಷಾತ್ಕಾರ ಅವಲೋಕನಮ್ – ಅವನನ್ನು ನಿಜವಾಗಿ ನೋಡಲು (ಅರಿಯಲು) ದಿವ್ಯ ಚಕ್ಷುಗಳು
ದತ್ತಮ್ ಉಕ್ತಮ್ – ಅಂತಹ ಕಣ್ಣುಗಳನ್ನು ಕೃಷ್ಣನು ಅರ್ಜುನನಿಗೆ ಕೊಡುತ್ತಾನೆ ಎಂದು ಹೇಳಲಾಗಿದೆ
ತಥಾ – ಹಾಗೆಯೇ
ವಿಧಿ ಪ್ರಾಪ್ತ್ಯೋ – ಅಂತಹ ಸರ್ವಶ್ರೇಷ್ಠ ದೇವರನ್ನು ಅರಿಯುವುದು, ನೋಡುವುದು, ಸೇರುವುದು ಮುಂತಾದುವುಗಳು
ಭಕ್ತಿ ಏಕ ಉಪಾಯತಾ – ಭಕ್ತಿಯೊಂದೇ ಇದಕ್ಕೆ ಮಾಧ್ಯಮ
ಉಕ್ತಮ್ – ಹೇಳಲಾಗಿದೆ

ಸರಳ ವಿವರಣೆ

ಹನ್ನೊಂದನೆಯ ಅಧ್ಯಾಯದಲ್ಲಿ ಭಗವಂತನನ್ನು ಕಾಣಲು ದಿವ್ಯದೃಷ್ಟಿಗಳನ್ನು ಕೃಷ್ಣನು ಅರ್ಜುನನಿಗೆ ಕೊಟ್ಟಿರುವುದಾಗಿ ಹೇಳುತ್ತಾರೆ. ಹಾಗೆಯೇ ಭಕ್ತಿಯೊಂದೇ ಸರ್ವಶ್ರೇಷ್ಠನಾದ ಭಗವಂತನನ್ನು ಅರಿಯಲು, ನೋಡಲು ಮತ್ತು ಸೇರಲು ಇರುವ ಮಾರ್ಗ ಎಂದು ಹೇಳಿದ್ದಾರೆ.

ಶ್ಲೋಕ – 16

ಭಕ್ತೇಃ ಶ್ರೇಷ್ಠ್ಯಮುಪಾಯೋಕ್ತಿರಶಕ್ತಸ್ಯಾತ್ಮನಿಷ್ಠಥಾ ।
ತತ್‌ಪ್ರಕಾರಾಸ್ತ್ವತಿಪ್ರೀತಿರ್ ಭಕ್ತೇ ದ್ವಾದಶ ಉಚ್ಯತೇ ॥

krishna-vidhura
ವಿದುರನು ಕೃಷ್ಣನ ಪ್ರೀತಿಪಾತ್ರನಾಗಿರುವುದು

ಕೇಳಿ

ಪದದಿಂದ ಪದಗಳ ಅರ್ಥ

ಭಕ್ತೇಃ ಶ್ರೇಷ್ಠ್ಯಂ – ಭಗವಂತನಲ್ಲಿ ಭಕ್ತಿಯೋಗದ ಶ್ರೇಷ್ಠತೆ ಆತ್ಮ ಉಪಾಸನೆಗೆ ಹೋಲಿಸಿದಾಗ (ತನ್ನ ಆತ್ಮಸಂತೋಷಕ್ಕಾಗಿ ತೊಡಗಿಸಿಕೊಳ್ಳುವುದು) ಉಪಾಯ ಉಕ್ತಿಃ  – ಅಂತಹ ಭಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಮಾರ್ಗ
ಅಶಕ್ತಾಸ್ಯ – ಭಕ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲದಿರುವುದು
ಆತ್ಮನಿಷ್ಠಥಾ – ತನ್ನನ್ನು ತಾನು ಅರಿಯಲು ತೊಡಗಿಸಿಕೊಳ್ಳುವುದು
ತತ್‍ಪ್ರಕಾರಾಃ – ಕರ್ಮಯೋಗದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಬೇಕಾದ ವಿವಿಧ ರೀತಿಯ ವಿಶಿಷ್ಟ ಗುಣಗಳು
ದ್ವಾದಶ ಉಚ್ಯತೇ – ಹನ್ನೆರಡನೇ ಅಧ್ಯಾಯದಲ್ಲಿ ಹೇಳಲಾಗಿದೆ

ಸರಳ ವಿವರಣೆ

ಹನ್ನೆರಡನೇ ಅಧ್ಯಾಯದಲ್ಲಿ , ಭಗವಂತನಲ್ಲಿನ ಭಕ್ತಿಯೋಗವನ್ನು ಆತ್ಮ ಉಪಾಸನೆಗೆ (ಆತ್ಮ ಸಂತೋಷಕ್ಕಾಗಿ ತೊಡಗಿಸಿಕೊಳ್ಳುವುದು ) ಹೋಲಿಸಿದಾಗ ಇರುವ ಶ್ರೇಷ್ಠತೆಯನ್ನು , ಅಂತಹ ಭಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ವಿವರಣೆ, ತನ್ನನ್ನು ತಾನು ಅರಿಯಲು ಪ್ರವೃತ್ತನಾಗುವ ಬಗೆ, ಯಾರಿಗೆ ಭಕ್ತಿಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ, ಕರ್ಮಯೋಗದಲ್ಲಿ ತೊಡಗಿಸಿಕೊಳ್ಳಲು ಬೇಕಾದ ವಿವಿಧ ರೀತಿಯ ವಿಶಿಷ್ಟ ಗುಣಗಳು , ಭಗವಂತನು ತನ್ನ ಭಕ್ತರಲ್ಲಿ ಇಟ್ಟಿರುವ ಅಮಿತವಾದ ಪ್ರೀತಿ ಮುಂತಾದುವುಗಳನ್ನು ವಿವರಿಸಲಾಗಿದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ :- http://githa.koyil.org/index.php/githartha-sangraham-4/

ಆರ್ಕೈವ್ ಮಾಡಲಾಗಿದೆ –  http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org