ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಕೊನೆಯ 6 ಅಧ್ಯಾಯಗಳ ತಾತ್ಪರ್‍ಯ
ಶ್ಲೋಕ – 17
ದೇಹಸ್ವರೂಪಮಾತ್ಮಾಪ್ತಿಹೇತುರಾತ್ಮವಿಶೋಧನಮ್ ।
ಬಂಧ ಹೇತುರ್ವಿವೇಕಶ್ಚ ತ್ರಯೋದಶ ಉಧೀರ್‍ಯತೇ ॥
ಪದದಿಂದ ಪದಗಳ ಅರ್ಥ
ದೇಹ ಸ್ವರೂಪಮ್ – ದೇಹದ ಸ್ವರೂಪ
ಆತ್ಮಾಪ್ತಿ ಹೇತುಃ – ಜೀವಾತ್ಮದ ಸ್ವರೂಪವನ್ನು ಹೊಂದಲು ಇರುವ ಮಾರ್ಗ
ಆತ್ಮವಿಶೋಧನಮ್ – ಆತ್ಮದ ಬಗ್ಗೆ ವಿಚಾರಿಸಿ ತಿಳಿದುಕೊಳ್ಳುವುದು
ಬಂಧ ಹೇತುಃ – ಬಂಧನಕ್ಕೆ ಕಾರಣವಾಗಿರುವುದು (ಆತ್ಮವು (ಚಿತ್) ದೇಹದೊಂದಿಗೆ (ಅಚಿತ್))
ವಿವೇಕಃ ಚ – ಪ್ರತ್ಯೇಕಿಸುವ ವಿಧಾನ (ಆತ್ಮ ಮತ್ತು ಅಚಿತ್ ಆದ ದೇಹದೊಂದಿಗೆ)
ತ್ರಯೋದಶೇ – ಹದಿಮೂರನೇ ಅಧ್ಯಾಯದಲ್ಲಿ
ಉಧೀರ್‍ಯತೇ – ಹೇಳಲಾಗಿದೆ
ಸರಳ ವಿವರಣೆ
ಹದಿಮೂರನೇ ಅಧ್ಯಾಯದಲ್ಲಿ ದೇಹದ ಸ್ವಭಾವ ಜೀವಾತ್ಮದ ನಿಜ ಸ್ವರೂಪವನ್ನು ಹೊಂದುವ ದಾರಿ, ಬಂಧನಕ್ಕೆ ಕಾರಣಗಳು (ಆತ್ಮದ (ಚಿತ್) ಜೊತೆಗೆ ದೇಹ (ಅಚಿತ್)) ಮತ್ತು ಅವುಗಳನ್ನು ಪ್ರತ್ಯೇಕಿಸುವ ವಿಧಾನ (ಆತ್ಮ ಮತ್ತು ಅಚಿತ್) ಇವೆಲ್ಲವನ್ನೂ ಹೇಳಲಾಗಿದೆ.
ಶ್ಲೋಕ – 18
ಗುಣಬಂಧವಿಧಾ ತೇಶಾಮ್ ಕರ್ತೃತ್ವಮ್ ತನ್ನಿವರ್ತನಮ್ ।
ಗತಿತ್ರಯಸ್ವಮೂಲತ್ವಮ್ ಚತುರ್ದಶ ಉಧೀರ್‍ಯತೇ ॥
ಪದದಿಂದ ಪದಗಳ ಅರ್ಥ
ಗುಣ ಬಂಧ ವಿಧಾ – ಮೂರು ವಿಧವಾದ ಗುಣಗಳು ಯಾವುವೆಂದರೆ ಸತ್ವಮ್, ರಜಸ್ ಮತ್ತು ತಮಸ್ – ಈ ಸಂಸಾರದಲ್ಲಿ ಬಂಧಿಸುತ್ತವೆ. (ಲೌಕಿಕ ಕ್ಷೇತ್ರದಲ್ಲಿ)
ತೇಶಾಮ್ ಕರ್ತೃತ್ವಮ್ – ಆ ಗುಣಗಳ ಸ್ವಭಾವವು ಕ್ರಿಯೆಗಳಿಗೆ ಕಾರಣವಾಗುತ್ತದೆ.
ತಾನ್ ನಿವರ್ತನಮ್ – ಆ ಗುಣಗಳನ್ನು ನಿವಾರಿಸುವ ಬಗೆ
ಗತಿ ತ್ರಯಸ್ವ ಮೂಲತ್ವಮ್ – ಭಗವಂತನು ತಾನೇ ಆ ಮೂರು ರೀತಿಯ ಫಲಿತಾಂಶಕ್ಕೆ ಮೂಲಸ್ವರೂಪನಾಗಿರುವುದು. (ಲೌಕಿಕ ಸಂಪತ್ತು, ತನ್ನನ್ನು ತಾನೇ ಆನಂದಿಸುವುದು ಮತ್ತು ಭಗವಂತನನ್ನು ಹೊಂದುವುದು)
ಚತುರ್ದಶೇ – ಹದಿನಾಲ್ಕನೆಯ ಅಧ್ಯಾಯದಲ್ಲಿ
ಉದೀರ್‍ಯತೇ – ಹೇಳಲಾಗಿದೆ
ಸರಳ ವಿವರಣೆ
ಹದಿನಾಲ್ಕನೆಯ ಅಧ್ಯಾಯದಲ್ಲಿ ಮೂರು ರೀತಿಯ ಗುಣಗಳು – ಸತ್ವಮ್, ರಜಸ್ ಮತ್ತು ತಮಸ್ ಹೇಗೆ ಈ ಸಂಸಾರದ ಬಂಧನದಲ್ಲಿ ಸಿಲುಕಿಸುತ್ತವೆ (ಲೌಕಿಕ ಕ್ಷೇತ್ರದಲ್ಲಿ) , ಆ ಗುಣಗಳ ಸ್ವಭಾವವು ವಿವಿಧ ಕ್ರಿಯೆಗೆ ಕಾರಣವಾಗುತ್ತವೆ, ಆ ಗುಣಗಳನ್ನು ನಿರ್ಮೂಲನೆ ಮಾಡುವ ವಿಧಾನ ಮತ್ತು ಭಗವಂತನೇ ಮೂರು ರೀತಿಯ ಫಲಿತಾಂಶಕ್ಕೆ ಮೂಲ ಸ್ವರೂಪನಾಗಿರುವುದನ್ನು (ಹೇರಳ ಲೌಕಿಕ ಸಂಪತ್ತು, ತನ್ನನ್ನು ತಾನೇ ಆನಂದಿಸುವುದು ಮತ್ತು ಭಗವಂತನನ್ನು ಪಡೆಯುವುದು ) ಇವುಗಳನ್ನು ಹೇಳಲಾಗಿದೆ.
ಶ್ಲೋಕ – 19
ಅಚಿನ್ಮಿಶ್ರಾಧ್ವಿಶುದ್ಧಾಚ್ಛ ಚೇತನಾತ್ ಪುರುಷೋತ್ತಮಃ ।
ವ್ಯಾಪನಾತ್ ಭರಣಾತ್ ಸ್ವಾಮ್ಯಾತ್ ಅನ್ಯಃ ಪಂಚದ ಶೋಧಿತಃ॥
ಪದದಿಂದ ಪದಗಳ ಅರ್ಥ
ಅಚಿನ್ ಮಿಶ್ರಾದ್ (ಚೇತನಾತ್) – ಅಚಿತ್ ಆದ ದೇಹಕ್ಕೆ ಅಂತಿಕೊಂಡಿರುವ ಬದ್ಧ ಜೀವಾತ್ಮಕ್ಕಿಂತಲೂ (ಬಂಧಿತ ಆತ್ಮ) ಮೇಲು
ವಿಶುದ್ಧಾತ್ ಚೇತನಾತ್ ಚ್ – ಪ್ರಾಕೃತ ಶರೀರ (ಲೌಕಿಕ ದೇಹ) ವನ್ನು ಬಿಟ್ಟಿರುವ ಮುಕ್ತ ಜೀವಾತ್ಮಕ್ಕಿಂತಲೂ ಮೇಲು.
ವ್ಯಾಪನಾತ್ – ವ್ಯಾಪಿಸಿಕೊಂಡಿರುವ
ಭರಣಾತ್ – ಅವುಗಳನ್ನು ಸಹಿಸಿಕೊಂಡಿರುವ
ಸ್ವಾಮ್ಯಾತ್ – ಅವರೆಲ್ಲರಿಗೂ ಸ್ವಾಮಿಯಾಗಿರುವ
ಅನ್ಯಃ – ವಿಭಿನ್ನವಾಗಿರುವ
ಪುರುಷೋತ್ತಮ – ಶ್ರೀಮನ್ನಾರಾಯಣರು ಪುರುಷೋತ್ತಮರು (ಎಲ್ಲಾ ಆತ್ಮಗಳಿಗಿಂತಲೂ ಉತ್ತಮವಾಗಿರುವ)
ಪಂಚದಶ ಉದಿತಃ – ಹದಿನೈದನೆಯ ಅಧ್ಯಾಯದಲ್ಲಿ ಹೇಳಿದ್ದಾರೆ.
ಸರಳ ವಿವರಣೆ
ಹದಿನೈದನೆಯ ಅಧ್ಯಾಯದಲ್ಲಿ ಪುರುಷೋತ್ತಮನಾದ ಶ್ರೀಮನ್ನರಾಯಣರ ಬಗ್ಗೆ ಹೇಳಲಾಗಿದೆ. ಅವರು ಶರೀರಕ್ಕೆ ಅಂಟಿಕೊಂಡಿರುವ ಬದ್ಧ ಜೀವಾತ್ಮಗಳಿಗಿಂತಲೂ (ಬಂಧಿತ ಆತ್ಮ) ಮೇಲು. ಮತ್ತು ತಮ್ಮ ಪ್ರಾಕೃತ ಶರೀರವನ್ನು ಬಿಟ್ಟಿರುವ ಮುಕ್ತ ಜೀವಾತ್ಮ(ಮುಕ್ತಾತ್ಮ)ಗಳಿಗಿಂತಲೂ ಮೇಲು. ಶ್ರೀಮನ್ನಾರಾಯಣರು ಅವರಿಗಿಂತಲೂ ವಿಭಿನ್ನರಾದವರು. ಎಲ್ಲವನ್ನೂ ವ್ಯಾಪಿಸಿಕೊಂಡಿರುವವರು , ಎಲ್ಲರನ್ನೂ ಸಹಿಸಿಕೊಂಡಿರುವವರು ಮತ್ತು ಎಲ್ಲರಿಗೂ ಸ್ವಾಮಿಯಾಗಿರುವವರು ಎಂದು ಹೇಳಲಾಗಿದೆ.
ಶ್ಲೋಕ – 20
ದೇವಾಸುರವಿಭಾಗೋಕ್ತಿ ಪೂರ್ವಿಕಾ ಶಾಸ್ತ್ರವಶ್ಯತಾ।
ತತ್ವಾನುಷ್ಠಾನ ವಿಜ್ಞಾನ ಸ್ತೇಮ್ನೇ ಷೋಡಶ ಉಚ್ಯತೇ ॥
ಪದದಿಂದ ಪದಗಳ ಅರ್ಥ
ತತ್ವ ಅನುಷ್ಠಾನ ವಿಜ್ಞಾನ ಸ್ತೇಮ್ನೇ – ಸತ್ಯದ ಅರಿವನ್ನು ಸ್ಥಾಪಿಸಲುಹೊಂದಬಹುದು (ಯಾವುದನ್ನು ಸೇರಬೇಕೋ) ಮತ್ತು ಆ ಪ್ರಕ್ರಿಯೆಯನ್ನು ಅಭ್ಯಾಸ ಮಾಡುವುದು (ಅದರಿಂದ ಗುರಿಯನ್ನು ಹೊಂದಬಹುದು)
ದೇವ ಅಸುರ ವಿಭಾಗ ಉಕ್ತಿ ಪೂರ್ವಿಕಾ – ದೇವ ಮತ್ತು ಅಸುರರನ್ನು ವಿಂಗಡಿಸುವ ಕ್ರಿಯೆ ಆದಮೇಲೆ (ಮನುಷ್ಯರಲ್ಲಿ)
ಶಾಸ್ತ್ರವಶ್ಯತಾ – ಶಾಸ್ತ್ರದಿಂದ ಬಂಧಿಸಲ್ಪಟ್ಟ ಸತ್ಯ
ಷೋಡಶ ಉಚ್ಯತೇ – ಹದಿನಾರನೆಯ ಅಧ್ಯಾಯದಲ್ಲಿ ಹೇಳಲಾಗಿದೆ
ಸರಳ ವಿವರಣೆ
ಹದಿನಾರನೆಯ ಅಧ್ಯಾಯದಲ್ಲಿ, ಮನುಷ್ಯರನ್ನು ದೇವ (ಸಾಧು) ಮತ್ತು ಅಸುರ (ಕ್ರೂರಿ) ರನ್ನಾಗಿ ವಿಂಗಡಿಸಿದ ಮೇಲೆ , ಸತ್ಯದ ಜ್ಞಾನವನ್ನು ಸ್ಥಾಪಿಸಲು (ಸತ್ಯವನ್ನು ಹೊಂದಬೇಕಾದರೆ) , ಆ (ಭಕ್ತಿಯೋಗದ) ಪ್ರಕ್ರಿಯೆಯನ್ನು ಅಭ್ಯಾಸಿಸಬೇಕು. (ಗುರಿಯನ್ನು ತಲುಪಲು) . ಈ ಶಾಸ್ತ್ರದಿಂದ ಬಂಧಿಸಲ್ಪಟ್ಟ ಮನುಷ್ಯರ ಬಗ್ಗೆ ಹೇಳಲಾಗಿದೆ.
ಶ್ಲೋಕ – 21
ಅಶಾಸ್ತ್ರಮಾಸುರಮ್ ಕೃತ್ಸ್ನಮ್ ಶಾಸ್ತ್ರೀಯಮ್ ಗುಣತಃ ಪೃಥಕ್ ।
ಲಕ್ಷಣಮ್ ಶಾಸ್ತ್ರಸಿದ್ಧಸ್ಯ ತ್ರಿಧಾ ಸಪ್ತದಶೋಧಿತಮ್ ॥
ಪದದಿಂದ ಪದಗಳ ಅರ್ಥ
ಕೃತ್ಸ್ನಮ್ ಅಶಾಸ್ತ್ರಮ್ – ಶಾಸ್ತ್ರದಲ್ಲಿ ಹೇಳದಿರುವ ಚಟುವಟಿಕೆಗಳು
ಆಸುರಮ್ – ಅವುಗಳು ಅಸುರರಿಗಾಗಿ (ಕ್ರೂರತನದಿಂದ ತುಂಬಿದೆ) (ಆದ್ದರಿಂದ ಅವು ಉಪಯೋಗರಹಿತವಾಗಿದೆ)
ಶಾಸ್ತ್ರೀಯಮ್ – ಶಾಸ್ತ್ರದಲ್ಲಿ ಹೇಳಿರುವ ಚಟುವಟಿಕೆಗಳು
ಗುಣತಃ – ಗುಣಗಳಿಂದ (ಸತ್ವ, ರಜಸ್ ಮತ್ತು ತಮಸ್)
ಪೃಥಕ್ – ಮೂರು ವಿಧಗಳಲ್ಲಿ ಇರುತ್ತದೆ
ಶಾಸ್ತ್ರ ಸಿದ್ಧಸ್ಯ – ಯಾಗ ಮುಂತಾದ ಶಾಸ್ತ್ರದಲ್ಲಿ ಹೇಳಿರುವ ಚಟುವಟಿಕೆಗಳು
ತ್ರಿಧಾ ಲಕ್ಷಣಮ್ – ಪದಗಳು “ಓಮ್ ತತ್ ಸತ್” (ಇವುಗಳನ್ನು ಕೂಡಿಸಿ ಹೇಳಿದಾಗ, ಇವುಗಳು ಬೇರೆ ಚಟುವಟಿಕೆಗಳಿಂದ ಅಂತಹವನ್ನು ಗುರುತಿಸಿ ಕೊಟ್ಟು ಬೇರ್ಪಡಿಸುತ್ತವೆ.
ಸಪ್ತದಶ ಉದಿತಮ್ – ಹದಿನೇಳನೆಯ ಅಧ್ಯಾಯದಲ್ಲಿ ಹೇಳಲಾಗಿದೆ.
ಸರಳ ವಿವರಣೆ
ಹದಿನೇಳನೆಯ ಅಧ್ಯಾಯದಲ್ಲಿ ಶಾಸ್ತ್ರದಲ್ಲಿ ಸೂಚಿಸದಿರುವ ಚಟುವಟಿಕೆಗಳು (ಕ್ರಿಯೆಗಳು) ಅಸುರರಿಗಾಗಿ (ಕ್ರೂರತನವನ್ನು ಹೊಂದಿರುವವರಿಗೆ) ಮತ್ತು ಅವುಗಳು ಉಪಯೋಗರಹಿತವಾಗಿವೆ. ಶಾಸ್ತ್ರದಲ್ಲಿ ಹೇಳಿರುವ ಕ್ರಿಯೆಗಳು ಮೂರು ಗುಣಗಳ ಮೇಲೆ ಅವಲಂಬಿಸಿವೆ – ಅವು ಸತ್ವ, ರಜಸ್ ಮತ್ತು ತಮಸ್. ಮೂರು ವೈವಿಧ್ಯಮಯವಾಗಿ ಇರುತ್ತವೆ. ಯಾಗ ಮುಂತಾದ ಕ್ರಿಯೆಗಳು ಶಾಸ್ತ್ರದಲ್ಲಿ ಹೇಳಿರುವ ಹಾಗೆ ಮುಂತಾದುವುಗಳು. “ಓಮ್ ತತ್ ಸತ್” – ಇವುಗಳನ್ನು ಕೂಡಿಸಿ ಹೇಳಿದಾಗ, ಇವುಗಳು ಬೇರೆ ಕ್ರಿಯೆಗಳಿಂದ ಅಂತಹ ಕ್ರಿಯೆಗಳನ್ನು ಗುರುತಿಸಿ ಬೇರ್ಪಡಿಸುತ್ತವೆ. ಎಂದು ಹೇಳಲಾಗಿದೆ.
ಶ್ಲೋಕ – 22
ಇಶ್ವರೇ ಕರ್ತೃತಾ ಬುದ್ಧಿಸ್ಸತ್ವೋಪಾಧೇಯ ತಾಂತಿಮೇ ।
ಸ್ವಕರ್ಮ ಪರಿಣಾಮಶ್ಚ ಶಾಸ್ತ್ರಸಾರಾರ್ಥ ಉಚ್ಯತೇ॥
ಕೇಳಿ
ಪದದಿಂದ ಪದಗಳ ಅರ್ಥ
ಇಶ್ವರೇ ಕರ್ತೃತಾ ಬುದ್ಧಿಃ – ಎಲ್ಲಾ ಕ್ರಿಯೆಗಳೂ ಭಗವಂತನಿಂದಲೇ ಮಾಡಲ್ಪಡುವುವು
ಸತ್ವ ಉಪಾದೇಯತಾ – ಸತ್ವ ಗುಣವನ್ನು (ಶಾಂತ ಮನಸ್ಸನ್ನು) ಹೊಂದಬೇಕು
ಸ್ವಕರ್ಮ ಪರಿಣಾಮಃ – ಮುಕ್ತಿಯೇ ಶುದ್ಧ ಮನಸ್ಸಿನ (ಸತ್ವಗುಣ) ಕ್ರಿಯೆಯ ಪರಿಣಾಮ ( ಈ ಕಟ್ಟಳೆಗೆ ಅನುಸಾರವಾಗಿ ಮಾಡಿದಾಗ)
ಶಾಸ್ತ್ರಮ್ ಸಾರಾರ್ಥಃ ಚ – ಭಕ್ತಿ ಮತ್ತು ಪ್ರಪತ್ತಿ ಗೀತಾಶಾಸ್ತ್ರದ ಸಾರವಾಗಿದೆ.
ಅಂತಿಮೇ – ಹದಿನೆಂಟನೆಯ ಅಧ್ಯಾಯದಲ್ಲಿ
ಉಚ್ಯತೇ – ಹೇಳಲಾಗಿದೆ.
ಸರಳ ವಿವರಣೆ
ಗೀತಾ ಶಾಸ್ತ್ರದ ಕೊನೆಯಲ್ಲಿ (ಹದಿನೆಂಟನೆಯ ಅಧ್ಯಾಯದಲ್ಲಿ) ಎಲ್ಲಾ ಕ್ರಿಯೆಗಳೂ ಭಗವಂತನಿಂದಲೇ ಮಾಡಲ್ಪಟ್ಟಿವೆ. ಸತ್ವಗುಣಮ್ (ಶಾಂತ ಮನಸ್ಸಿನ ಸ್ವರೂಪವನ್ನು) ಹೊಂದಬೇಕು ಮತ್ತು ಮುಕ್ತಿಯೇ ಅಂತಹ ಸತ್ವಗುಣದ ಫಲಿತಾಂಶವಾಗಿದೆ. (ಈ ಕಟ್ಟಳೆಗೆ ಅನುಸಾರವಾಗಿ ಮಾಡಿದಾಗ). ಭಕ್ತಿ ಮತ್ತು ಪ್ರಪತ್ತಿ ಗೀತಾಶಾಸ್ತ್ರದ ಸಾರವಾಗಿದೆ ಎಂದು ಹೇಳಲಾಗಿದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ :- http://githa.koyil.org/index.php/githartha-sangraham-5/
ಆರ್ಕೈವ್ ಮಾಡಲಾಗಿದೆ – http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org