ಗೀತಾರ್ಥ ಸಂಗ್ರಹಮ್ – 1

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಗೀತಾರ್ಥ ಸಂಗ್ರಹಮ್

bhagavan

ಶ್ಲೋಕ – 1 (ಗೀತಾ ಶಾಸ್ತ್ರದ ಉದ್ದೇಶ)

ಸ್ವಧರ್ಮ ಜ್ಞಾನ ವೈರಾಗ್ಯ ಸಾಧ್ಯ ಭಕ್ತ್ಯೇಕ ಗೋಚರಃ ।
ನಾರಾಯಣ ಪರಬ್ರಹ್ಮ ಗೀತಾ ಶಾಸ್ತ್ರೇ ಸಮೀರಿತಃ ॥

ಕೇಳಿ

ಪದದಿಂದ ಪದಗಳ ಅರ್ಥ

• ಸ್ವಧರ್ಮ ಜ್ಞಾನ ವೈರಾಗ್ಯ ಸಾಧ್ಯ ಭಕ್ತ್ಯೇಕ ಗೋಚರಃ – ಲೌಕಿಕ ವಿಷಯಗಳನ್ನು ತೊರೆದು ಭಕ್ತಿಯಲ್ಲೇ ತನ್ನನ್ನು ತಾನು ತಿಳಿಯಪಡುವವನು.ಜ್ಞಾನ ಯೋಗಮ್(ಜ್ಞಾನದ ದಾರಿ) ಮತ್ತು ಕರ್ಮಯೋಗಮ್(ಧರ್ಮವನ್ನು ಅನುಸರಿಸುವ ದಾರಿ) ಇವುಗಳು ವ್ಯಕ್ತಿಯ ವರ್ಣ ಮತ್ತು ಆಶ್ರಮವನ್ನು ಅನುಸರಿಸಿ ಅವನ ಸಹಜವಾದ ಗುಣಕ್ಕೆ ಸೂಕ್ತವಾಗಿದೆ.
• ಪರಬ್ರಹ್ಮ – ಅತ್ಯಂತ ಶ್ರೇಷ್ಠ ಬ್ರಹ್ಮಂ ಆಗಿರುವವರು
• ನಾರಾಯಣಃ – ಶ್ರೀಮನ್ ನಾರಾಯಣ
• ಗೀತಾ ಶಾಸ್ತ್ರೇ – ಗೀತಾ ಎಂಬ ಶಾಸ್ತ್ರದಲ್ಲಿ
• ಸಮೀರಿತಃ – ಬಹಿರಂಗಪಡಿಸಲಾಗಿದೆ

ಸರಳ ವಿವರಣೆ

ಶ್ರೀಮನ್ನಾರಾಯಣರು ಭಕ್ತಿಯಿಂದಲೇ ಅರಿಯಲ್ಪಡುವವರು. ಅದನ್ನು (ಭಕ್ತಿಯನ್ನು) ಪಡೆಯಲು ಲೌಕಿಕ ವಿಷಯಗಳಿಂದ ಮುಕ್ತರಾದರೆ ಮಾತ್ರ ತಿಳಿಯಬಹುದು. ಜ್ಞಾನ ಯೋಗಮ್ (ಜ್ಞಾನದ ದಾರಿ) ಮತ್ತು ಕರ್ಮ ಯೋಗಮ್ (ಧರ್ಮದ ದಾರಿ)ಯನ್ನು ಅನುಸರಿಸುವುದೇ ಒಬ್ಬ ವ್ಯಕ್ತಿಗೆ ಅವನ ಸಹಜವಾದ ಗುಣಕ್ಕೆ (ಅವನ ವರ್ಣ ಮತ್ತು ಆಶ್ರಮಕ್ಕೆ ಅನುಸಾರವಾಗಿ) ಸೂಕ್ತವಾದುದು. ಭಗವಂತನು ಶ್ರೇಷ್ಠವಾದ ಬ್ರಹ್ಮನು. ಅಂತಹ ಭಗವಂತನನ್ನು ಗೀತೆ ಎಂಬ ಶಾಸ್ತ್ರವು ಬಹಿರಂಗಪಡಿಸುತ್ತದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://githa.koyil.org/index.php/githartha-sangraham-1/

ಆರ್ಕೈವ್ ಮಾಡಲಾಗಿದೆ –  http://githa.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org