ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಮೂರು ಷಟಕಗಳ ಸಾರಾಂಶ:
ಶ್ಲೋಕ – 2
ಜ್ಞಾನಕರ್ಮಾತ್ಮಿಕೇ ನಿಷ್ಠೇ ಯೋಗಲಕ್ಷ್ಯೇ ಸುಸಂಸ್ಕೃತೇ ।
ಆತ್ಮಾನುಭೂತಿ ಸಿಧ್ಯರ್ಥೇ ಪೂರ್ವ ಷಟಕೇನ ಚೋದಿತೇ ॥
ಕೇಳಿ
ಪದದಿಂದ ಪದಗಳ ಅರ್ಥ
ಸುಸಂಸ್ಕೃತೇ – ಚೆನ್ನಾಗಿ ಅಲಂಕರಿಸಲ್ಪಟ್ಟ (ಶೇಷತ್ವಜ್ಞಾನದಿಂದ – ಭಗವಂತನ ಹತ್ತಿರ ಸೇವಕನ ಹಾಗೆ ಇರುವುದು , ಲೌಕಿಕ ವಿಷಯಗಳಿಂದ ಮುಕ್ತನಾಗುವುದು ಮುಂತಾದುವುಗಳು)
ಜ್ಞಾನ ಕರ್ಮಾತ್ಮಿಕೇ ನಿಷ್ಠೇ – ಜ್ಞಾನ ಯೋಗಮ್ (ಕಲುಷಿತವಾಗದ ಅರಿವಿನ ದಾರಿ) ಕರ್ಮಯೋಗಮ್ (ಧರ್ಮ ಗ್ರಂಥಗಳ ಪ್ರಕಾರ ಕಟ್ಟಳೆಗಳು).
ಯೋಗ ಲಕ್ಷ್ಯೇ – ಯೋಗವನ್ನು ಪಡೆಯುವುದು (ಆತ್ಮಸಾಕ್ಷಾತ್ಕಾರ – ತನ್ನನ್ನು ತಾನು ಅರಿಯುವುದು)
ಆತ್ಮಾನುಭೂತಿ ಸಿಧ್ಯರ್ಥೇ – (ಮತ್ತು ಮುಂದೆ) ಆತ್ಮಾನುಭವವನ್ನು ಪಡೆಯುವುದು. (ತನ್ನಲ್ಲಿ ತಾನೇ ಪರಮಾನಂದವನ್ನು ಪಡೆಯುವುದು)
ಪೂರ್ವ ಷಟಕೇನ – ಮೊದಲ ಷಟಕ (ಮೊದಲ ಆರು ಅಧ್ಯಾಯಗಳು)
ಚೋದಿತೇ – ಸಂಕಲ್ಪಿಸು
ಸರಳ ವಿವರಣೆ
ಮೊದಲ ಆರು ಅಧ್ಯಾಯಗಳು ಕರ್ಮಯೋಗ ಮತ್ತು ಜ್ಞಾನ ಯೋಗವನ್ನು ಅನುಷ್ಠಾನಿಸುತ್ತದೆ. ಅವುಗಳು ಆತ್ಮಸಾಕ್ಷಾತ್ಕಾರ ಮತ್ತು ತನ್ನಲ್ಲೇ ಆನಂದ ಪಡೆಯುವುದನ್ನು (ಪ್ರತಿಯೊಬ್ಬರ ಸೇವಕತ್ವವನ್ನು ಮತ್ತು ಲೌಕಿಕ ವಿಷಯಗಳಿಂದ ಮುಕ್ತಿಯನ್ನು ) ತಿಳಿಸುತ್ತದೆ.
ಶ್ಲೋಕಮ್ – 3
ಮಧ್ಯಮೇ ಭಗವತ್ತತ್ವ ಯಾದಾತ್ಮ್ಯಾವಾಪ್ತಿ ಸಿದ್ಧಯೇ ।
ಜ್ಞಾನ- ಕರ್ಮಾಪಿ ನಿರ್ವರ್ತ್ಯೋ ಭಕ್ತಿಯೋಗಃ ಪ್ರಕೀರ್ತಿತಃ ॥
ಕೇಳಿ
ಪದದಿಂದ ಪದಗಳ ಅರ್ಥ
ಮಧ್ಯಮೇ – ಮಧ್ಯದಲ್ಲಿರುವ ಷಟಕಗಳು (6 ಅಧ್ಯಾಯಗಳು)
ಭಗವತ್ ತತ್ವ ಯಾದಾತ್ಮ್ಯ ಅವಾಪ್ತಿ ಸಿದ್ಧಯೇ – ಅತೀ ಶ್ರೇಷ್ಠವಾದ ಭಗವಂತನ ಅನುಭವವನ್ನು ಪಡೆಯಲು
ಜ್ಞಾನ ಕರ್ಮ ಅಭಿ ನಿರ್ವರ್ತ್ಯ – ಕರ್ಮ ಯೋಗದಿಂದ ಬೆಳೆಯುವ ಮತ್ತು ನಿಜವಾದ ಜ್ಞಾನದಿಂದ ಆಧಾರವಾಗಿರುವ
ಭಕ್ತಿಯೋಗಃ – ಭಕ್ತಿಯೋಗವು (ಭಕ್ತಿಯ ದಾರಿ)
ಪ್ರಕೀರ್ತಿತಃ – ವಿವರಿಸಲ್ಪಡುತ್ತದೆ.
ಸರಳ ವಿವರಣೆ
ಮಧ್ಯಮ ಷಟಕದಲ್ಲಿ ಕರ್ಮಯೋಗದಿಂದ ಬೆಳೆದ ಭಕ್ತಿಯೋಗ, ಅದನ್ನು ಬೆಂಬಲಿಸುವ ಜ್ಞಾನ – ಅರಿವು , ಅದರಿಂದ ನಿಜವಾದ ಅನುಭವವನ್ನು ಪಡೆಯಬಹುದು ಎಂದು ವಿವರಿಸಲಾಗಿದೆ.
ಶ್ಲೋಕ – 4
ಪ್ರಧಾನ ಪುರುಷ ವ್ಯಕ್ತ ಸರ್ವೇಶ್ವರ ವಿವೇಚನಮ್ ।
ಕರ್ಮಧೀರ್ ಭಕ್ತಿರಿತ್ಯಾದಿಃ ಪೂರ್ವಶೇಷೋಂತಿಮೋದಿತಃ ॥
ಕೇಳಿ
ಪದದಿಂದ ಪದಗಳ ಅರ್ಥ
ಪ್ರಧಾನ ಪುರುಷ ವ್ಯಕ್ತ ಸರ್ವೇಶ್ವರ ವಿವೇಚನಮ್ – ಮೂಲ ಪ್ರಕೃತಿಯ ಬಗ್ಗೆ ವಿವರಿಸಿದ್ದಾರೆ. ಅದು ತುಂಬಾ ಸೂಕ್ಷ್ಮವಾದುದು. ಜೀವಾತ್ಮ (ಚೇತನ) ಮತ್ತು ಅಚೇತನಗಳು ತುಂಬಾ ಗಾಢವಾದದ್ದು. ಸರ್ವೇಶ್ವರನು ಇದಕ್ಕೆಲ್ಲಾ ನಾಯಕರಾದವರು.
ಕರ್ಮ – ಕರ್ಮಯೋಗಮ್
ಧೀರ್ – ಜ್ಞಾನಯೋಗಮ್
ಭಕ್ತಿ – ಭಕ್ತಿಯೋಗಮ್
ಇತ್ಯಾದಿಃ – ಇದನ್ನು ಪಡೆಯುವ ಪ್ರಕ್ರಿಯೆ
ಪೂರ್ವಶೇಷಃ – ಹಿಂದಿನ ಶೀರ್ಷಿಕೆಯಲ್ಲಿ ವಿವರಿಸದಿದ್ದ ವಿಭಾಗಗಳು
ಅಂತಿಮೋದಿತಃ – ಇದನ್ನು ಕೊನೆಯ ಷಟಕದಲ್ಲಿ ವಿವರಿಸಿದ್ದಾರೆ.
ಸರಳ ವಿವರಣೆ
ಮೂಲ ಪ್ರಕೃತಿಯು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಜೀವಾತ್ಮ ಅಚೇತನಗಳು ಗಾಢವಾಗಿರುತ್ತವೆ. ಸರ್ವೇಶ್ವರನು ಎಲ್ಲರಿಗೂ ನಾಯಕನಾದವನು. ಕರ್ಮಯೋಗ , ಜ್ಞಾನಯೋಗ ಮತ್ತು ಭಕ್ತಿಯೋಗಗಳ ಪ್ರಕ್ರಿಯೆಯಲ್ಲಿ ಆ ಭಗವಂತನನ್ನು ಪಡೆಯಬಹುದಾಗಿದೆ. ಇದನ್ನು ಕೊನೆಯ ಷಟಕದಲ್ಲಿ ವಿವರಿಸಲಾಗಿದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ :- http://githa.koyil.org/index.php/githartha-sangraham-2/
ಆರ್ಕೈವ್ ಮಾಡಲಾಗಿದೆ – http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org