ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಮೊದಲ 6 ಅಧ್ಯಾಯಗಳ ಪ್ರತಿ ವಿಭಾಗದ ಸಾರಾಂಶ
ಶ್ಲೋಕ – 5
ಅಸ್ಥಾನ ಸ್ನೇಹ ಕಾರುಣ್ಯ ಧರ್ಮಾಧರ್ಮಧಿಯಾಕುಲಮ್ ।
ಪಾರ್ಥಮ್ ಪ್ರಪನ್ನಮುದ್ಧಿಷ್ಯ ಶಾಸ್ತ್ರಾವತರಣಮ್ ಕೃತಮ್ ॥
ಕೇಳಿ
ಪದದಿಂದ ಪದಗಳ ಅರ್ಥ
ಅಸ್ಥಾನ ಸ್ನೇಹ ಕಾರುಣ್ಯ ಧರ್ಮಾಧರ್ಮದಿಯಾ – ಸೂಕ್ತವಲ್ಲದ ಬಂಧನದೊಳಪಟ್ಟು , ಅನರ್ಹವಾದ ಬಂಧುಗಳಿಗೆ ಕರುಣೆ ತೋರಿಸುವುದು (ಆತ್ಮದ ಸಹಜವಾದ ಗುಣಕ್ಕೆ ವಿರೋಧವಾಗಿ) ವಿಪರೀತ ಜ್ಞಾನವನ್ನು ಹೊಂದಿ, ಧರ್ಮ ಯುದ್ಧವನ್ನು ಅಧರ್ಮವೆಂದು ಪರಿಗಣಿಸಿ
ಆಕುಲಮ್ – ಅಲ್ಲಾಡಿಸಲ್ಪಡು
ಪ್ರಪನ್ನಮ್ – ಶರಣಾಗತಿಯಾಗಿ
ಪಾರ್ಥಮ್ ಉದ್ದಿಷ್ಯ – ಅರ್ಜುನನಿಗೆ ಉದ್ದೇಶಿಸಿರುವುದು
ಶಾಸ್ತ್ರಾವತರಣಮ್ ಕೃತಮ್ – ಗೀತಾ ಶಾಸ್ತ್ರವು ಆರಂಭವಾಗುವುದು (ಮೊದಲನೆಯ ಅಧ್ಯಾಯ ಮತ್ತು ಎರಡನೆಯ ಅಧ್ಯಾಯದ ಮೊದಲ ಭಾಗದಲ್ಲಿ)
ಸರಳ ವಿವರಣೆ
ಅರ್ಜುನನು ವಿಪರೀತ ಜ್ಞಾನವನ್ನು ಹೊಂದಿ, ಧರ್ಮಯುದ್ಧವನ್ನು ಅಧರ್ಮ ಯುದ್ಧವೆಂದು ಪರಿಗಣಿಸಿ, ಅನರ್ಹ ಬಂಧುಗಳಿಗಾಗಿ ಕರುಣೆಯನ್ನು ಹೊಂದಿ, ಅವರಿಗಾಗಿ ಸೂಕ್ತವಿಲ್ಲದ ಬಾಂಧವ್ಯವನ್ನು ಹೊಂದಿ, ಇದರಿಂದ ಧೈರ್ಯವನ್ನು ಕಳೆದುಕೊಂಡು , ಸ್ಥಿರತೆಯನ್ನು ಕಳೆದುಕೊಂಡು, ಕೊನೆಗೆ ಕೃಷ್ಣನಿಗೆ ಶರಣಾಗತಿ ಹೊಂದಿದಾಗ, ಗೀತಾಶಾಸ್ತ್ರದ ಉಪದೇಶವು ಆರಂಭವಾಯಿತು. (ಮೊದಲನೆಯ ಮತ್ತು ಎರಡನೆಯ ಅಧ್ಯಾಯದ ಮೊದಲ ಭಾಗದಲ್ಲಿ).
ಶ್ಲೋಕ – 6
ನಿತ್ಯಾತ್ಮ ಸಂಗಕರ್ಮೇಹಾಗೋಚರಾ ಸಾಂಖ್ಯಯೋಗಧೀಃ ।
ದ್ವಿತೀಯೇ ಸ್ಥಿತಧೀಲಕ್ಷಾ ಪ್ರೋಕ್ತಾ ತನ್ ಮೋಹಶಾಂತಯೇ ॥
ಕೇಳಿ
ಪದದಿಂದ ಪದಗಳ ಅರ್ಥ
ನಿತ್ಯ ಆತ್ಮ ಅಸಂಗ ಕರ್ಮ ಈಹಾ ಗೋಚರಾ – ಶಾಶ್ವತವಾದ ಆತ್ಮ, ಲೌಕಿಕ ನಿರ್ಲಿಪ್ತತೆ ಮುಂತಾದ ವಿಷಯಗಳು
ಸ್ಥಿತಧೀಲಕ್ಷಾ – ಸ್ಥಿತಪ್ರಜ್ಞತೆ (ಜ್ಞಾನದಲ್ಲಿ ಮತ್ತು ನೀತಿಯಲ್ಲಿ ದೃಢತೆ) ಯನ್ನು ಹೊಂದಿರುವುದೇ ಗುರಿಯಾಗಿ
ಸಾಂಖ್ಯ ಯೋಗಧೀಃ – ತನ್ನ ಬಗೆಗಿನ ಅರಿವು ಮತ್ತು ಕರ್ಮಯೋಗ
ತನ್ ಮೋಹ ಶಾಂತಯೇ – ಅರ್ಜುನನ ಅತಿ ವಿಸ್ಮಯವನ್ನು ದೂರ ಮಾಡುವುದು
ದ್ವಿತೀಯೇ – ಎರಡೆನೆಯ ವಿಭಾಗದ ಎರಡೆನೆಯ ಕಾಂಡ
ಪ್ರೋಕ್ತಾ – ಸೂಚಿಸಲ್ಪಟ್ಟ
ಸರಳ ವಿವರಣೆ
ನಿರಂತರವಾದ ಆತ್ಮ, ನಿರ್ಲಿಪ್ತತೆ ಹೊಂದಿದ ಧರ್ಮಯುಕ್ತ ಕರ್ತವ್ಯಗಳು, ಸ್ಥಿತಪ್ರಜ್ಞತೆಯ ಗುರಿ (ಬುದ್ಧಿ ಮತ್ತು ನಿರ್ಣಯದಲ್ಲಿ ನಿಶ್ಚಲ ಭಾವ) ತನ್ನನ್ನು ತಾನು ಅರಿಯುವುದು ಮತ್ತು ಕರ್ಮಯೋಗಗಳು ಇವನ್ನೆಲ್ಲಾ ಅರ್ಜುನನ ವಿಸ್ಮಯವನ್ನು ಹೋಗಲಾಡಿಸಲು ಎರಡನೆಯ ಅಧ್ಯಾಯದ ಎರಡನೆಯ ಭಾಗದಲ್ಲಿ ಸೂಚಿಸಲಾಗುವುದು.
ಶ್ಲೋಕ – 7
ಅಸಕ್ತ್ಯಾ ಲೋಕರಕ್ಷಾಯೈ ಗುಣೇಶ್ವರೋಪ್ಯ ಕರ್ತೃತಾಮ್ ।
ಸರ್ವೇಷ್ವರೇ ವಾನ್ಯಸ್ಯೋಕ್ತಾ ತೃತೀಯೇ ಕರ್ಮಕಾರ್ಯತಾ ॥
ಕೇಳಿ
ಪದದಿಂದ ಪದಗಳ ಅರ್ಥ
ಲೋಕರಕ್ಷಾಯೈ – ಜನಗಳನ್ನು ರಕ್ಷಿಸುವುದು (ಯಾರಿಗೆ ಜ್ಞಾನಯೋಗದಲ್ಲಿ ಅರ್ಹತೆಯಿಲ್ಲವೋ)
ಗುಣೇಶು – ಗುಣಗಳು ಅವು ಯಾವುವೆಂದರೆ, ಸತ್ವ (ಪ್ರಶಾಂತತೆ) , ರಜಸ್ (ಉದ್ವೇಗ), ಮತ್ತು ತಮಸ್ (ಅಜ್ಞಾನ)
ಕರ್ತೃತಾಮ್ ಆರೋಪ್ಯ – ಮಾಡುವವರನ್ನು ಧ್ಯಾನಿಸುವುದು
ಸರ್ವೇಶ್ವರೇ ವಾ ನ್ಯಸ್ಯ – ಕರ್ತವ್ಯ ಮಾಡುವತನವನ್ನು ಶ್ರೇಷ್ಠವಾದ ಪರಮಾತ್ಮನಿಗೆ ಸಮರ್ಪಿಸುವುದು
ಅಸಕ್ತ್ಯಾ – ಮೋಕ್ಷವನ್ನು ಬಿಟ್ಟು ಎಲ್ಲಾ ಗುರಿಗಳಲ್ಲಿಯೂ ಅನಾಸಕ್ತನಾಗಿರುವುದು
ಕರ್ಮ ಕಾರ್ಯತಾ – ಎಲ್ಲರೂ ಪಾಲಿಸಬೇಕಾದ ಕರ್ತವ್ಯ
ತೃತೀಯೇ ಉಕ್ತಾ – ಮೂರನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ
ಸರಳ ವಿವರಣೆ
ಮೂರನೆಯ ಅಧ್ಯಾಯದಲ್ಲಿ ಹೀಗೆ ವಿವರಿಸಿದ್ದಾರೆ. ಜನಗಳನ್ನು ರಕ್ಷಿಸಬೇಕಾದರೆ (ಯಾರಿಗೆ ಜ್ಞಾನಯೋಗದಲ್ಲಿ ಅರ್ಹತೆಯಿಲ್ಲವೋ) ತಮಗೆ ವಹಿಸಿದ ಕರ್ತವ್ಯಗಳನ್ನು ಮಾಡಬೇಕು. ತನ್ನ ಕರ್ತವ್ಯಗಳಿಗೆ ಧ್ಯಾನವನ್ನು ಕೊಡಬೇಕು. ಅವುಗಳು ಮೂರು ರೀತಿಯ ಗುಣಗಳಿಂದ ಪ್ರಭಾವಕ್ಕೊಳಪಟ್ಟಿರುತ್ತವೆ. ಆ ಗುಣಗಳು ಸತ್ವ(ಪ್ರಶಾಂತತೆ) , ರಜಸ್(ಉದ್ವೇಗ) ಮತ್ತು ತಮಸ್(ಅಜ್ಞಾನ). ನಾವು ಮಾಡುವ ಕೆಲಸಗಳನ್ನು ಯಾವುದೇ ಬಾಂಧವ್ಯವಿಲ್ಲದೇ ಮೋಕ್ಷವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಸರ್ವಶ್ರೇಷ್ಠನಾದ ಭಗವಂತನಿಗೆ ಸಮರ್ಪಿಸಬೇಕು.
ಶ್ಲೋಕ – 8
ಪ್ರಸಂಗಾತ್ ಸ್ವಸ್ವಭಾವೋಕ್ತಿಃ ಕರ್ಮಣೋಕರ್ಮತಾಸ್ಯ ಚ ।
ಭೇದಾಃ , ಜ್ಞಾನಸ್ಯ ಮಹಾತ್ಮ್ಯಮ್ ಚತುರ್ಥಾಧ್ಯಾಯ ಉಚ್ಯತೇ ॥
ಕೇಳಿ
ಪದದಿಂದ ಪದಗಳ ಅರ್ಥ
ಚತುರ್ಥಾಧ್ಯಾಯೇ – ನಾಲ್ಕನೆಯ ಅಧ್ಯಾಯದಲ್ಲಿ
ಕರ್ಮಣಃ ಅಕರ್ಮತಾ ಉಚ್ಯತೇ – ಕರ್ಮಯೋಗವನ್ನು (ಅದು ಜ್ಞಾನಯೋಗವನ್ನೂ ಒಳಗೊಂಡಿರುತ್ತದೆ) ಜ್ಞಾನಯೋಗವೆಂದೇ ವಿವರಿಸಿದ್ದಾರೆ .
ಅಸ್ಯ ಭೇದಾಃ ಚ (ಉಚ್ಯತೇ) – ಕರ್ಮಯೋಗದ ಗುಣಗಳನ್ನು ಮತ್ತು ಉಪಭಾಗಗಳನ್ನು ವಿವರಿಸಲಾಗಿದೆ.
ಜ್ಞಾನಸ್ಯ ಮಾಹಾತ್ಮ್ಯಂ (ಉಚ್ಯತೇ)-ಪರಮ ಜ್ಞಾನದ ವೇಶಿಯಷ್ಟ್ಯತೆಯನ್ನು ವಿವರಿಸಲಾಗಿದೆ
ಪ್ರಸಂಗಾತ್ – (ಅವನ ಶಬ್ದಗಳಿಗೆ ದೃಢೀಕರಣವನ್ನು ಸ್ಥಾಪಿಸಲು ) ಪರಿಸ್ಥಿತಿಗೆ ವಶಗೊಂಡು -ಒಳಗಾಗಿ
ಸ್ವಸ್ವಭಾವೋಕ್ತಿಃ – ಅವನ ಆ ಗುಣಗಳ ಬಗ್ಗೆ ಪ್ರವಚನ (ಅವನ ಗುಣಗಳು ಅವತಾರಗಳಲ್ಲಿಯೂ ಬದಲಾಗುವುದಿಲ್ಲ)ಗಳನ್ನು ಮೊದಲೇ ವಿವರಿಸಲಾಗಿದೆ.
ಸರಳ ವಿವರಣೆ
ನಾಲ್ಕನೆಯ ಅಧ್ಯಾಯದಲ್ಲಿ , ಕರ್ಮಯೋಗವನ್ನು (ಜ್ಞಾನಯೋಗವನ್ನೂ ಒಳಗೊಂಡಿರುವ) ಜ್ಞಾನಯೋಗವೆಂದೇ ವಿವರಿಸಲಾಗಿದೆ. ಕರ್ಮಯೋಗದ ಸ್ವಭಾವಗಳನ್ನು ಮತ್ತು ಉಪಭಾಗಗಳನ್ನು , ನಿಜವಾದ ಜ್ಞಾನದ ಶ್ರೇಷ್ಠತೆಯನ್ನೂ (ಅವನ ಶಬ್ದಗಳಿಗೆ ದೃಢೀಕರಣವನ್ನು ಸ್ಥಾಪಿಸಲು (ನಿರೂಪಿಸಲು)) ಆ ಪ್ರಸಂಗದಲ್ಲಿ ಅವನ ಅವತಾರಗಳಲ್ಲಿಯೂ ಬದಲಾಗದ ಅವನ ಆ ಗುಣಗಳನ್ನು ವಿವರಿಸಲಾಗಿದೆ.
ಶ್ಲೋಕ – 9
ಕರ್ಮಯೋಗಸ್ಯ ಸೌಕರ್‍ಯಮ್ ಶೈಗ್ರ್ಯಮ್ ಕಾಸ್ಚನ ತದ್ವಿಧಾಃ ।
ಬ್ರಹ್ಮಜ್ಞಾನ ಪ್ರಕಾರಸ್ಚ ಪಂಚಮಾಧ್ಯಾಯ ಉಚ್ಯತೇ ॥
ಕೇಳಿ
ಪದದಿಂದ ಪದಗಳ ಅರ್ಥ
ಕರ್ಮಯೋಗಸ್ಯ – ಕರ್ಮಯೋಗಮ್
ಸೌಕರ್‍ಯಮ್ – ಪ್ರಾಯೋಗೀಕತೆ
ಶೈಗ್ರ್ಯಮ್ – ಗುರಿಯನ್ನು ಶೀಘ್ರವಾಗಿ ತಲುಪಲು
ಕಾಸ್ಚನ ತದ್ವಿಧಾಃ – ಕರ್ಮಯೋಗದ ಪೂರಕವಾಗಿರುವ ಭಾಗಗಳು
ಬ್ರಹ್ಮಜ್ಞಾನ ಪ್ರಕಾರಃ ಚ – ಎಲ್ಲಾ ಶುದ್ಧ ಆತ್ಮಗಳನ್ನು ಒಂದೇ ರೀತಿಯಲ್ಲಿ ನೋಡುವುದು
ಪಂಚಮಾಧ್ಯಾಯೇ – ಐದನೆಯ ಅಧ್ಯಾಯದಲ್ಲಿ
ಉಚ್ಯತೇ – ಹೇಳಲಾಗಿದೆ
ಸರಳ ವಿವರಣೆ
ಐದನೆಯ ಅಧ್ಯಾಯದಲ್ಲಿ ಕರ್ಮಯೋಗದ ಪ್ರಾಯೋಗೀಕತೆ , ಅದರ ಗುರಿಯನ್ನು ವೇಗವಾಗಿ ತಲುಪುವ ಬಗೆ, ಅದರ ಪೂರಕವಾಗಿರುವ ಭಾಗಗಳು, ಎಲ್ಲಾ ಶುದ್ಧ ಆತ್ಮಗಳನ್ನು ಒಂದೇ ರೀತಿಯಲ್ಲಿ ನೋಡುವುದನ್ನು ವಿವರಿಸಲಾಗಿದೆ.
ಶ್ಲೋಕ – 10
ಯೋಗಾಭ್ಯಾಸವಿಧಿರ್ ಯೋಗೀ ಚತುರ್ಥಾ ಯೋಗಸಾಧನಮ್ ।
ಯೋಗಸಿದ್ಧಿಃ ಸ್ವಯೋಗಸ್ಯ ಪಾರಮ್ಯಮ್ ಷಷ್ಠ ಉಚ್ಯತೇ ॥
ಕೇಳಿ
ಪದದಿಂದ ಪದಗಳ ಅರ್ಥ
ಯೋಗಾಭ್ಯಾಸ ವಿಧಿಃ – ಯೋಗವನ್ನು ಅಭ್ಯಾಸಿಸುವ ಕ್ರಮ (ಅದರ ಜೊತೆ ಆತ್ಮಸಾಕ್ಷಾತ್ಕಾರಕ್ಕೆ ದಾರಿ – ತನ್ನನ್ನು ತಾನು ಅರಿಯುವುದು)
ಚತುರ್ಥಾಯೋಗೀ – ನಾಲ್ಕು ರೀತಿಯ ಯೋಗಿಗಳು
ಯೋಗ ಸಾಧನಮ್ – ವ್ಯಾಯಾಮಗಳು, ಲೌಕಿಕ ವಿಷಯಗಳಿಗೆ ಅನಾಸಕ್ತಿ, ಮುಂತಾದುವುಗಳು ಯೋಗಕ್ಕೆ ದಾರಿ.
ಯೋಗ ಸಿದ್ಧಿಃ – ಅಂತಹ ಯೋಗವು ಕೊನೆಯಲ್ಲಿ ಯಶಸ್ವಿಯಾಗುತ್ತದೆ.
ಸ್ವಯೋಗಸ್ಯ ಪಾರಮ್ಯಮ್ – ಭಕ್ತಿಯೋಗದ ಶ್ರೇಷ್ಠತೆ ಕೃಷ್ಣನಿಗೇ
ಷಷ್ಠೇ ಉಚ್ಯತೇ – ಆರನೆಯ ಅಧ್ಯಾಯದಲ್ಲಿ ಹೇಳಿದ್ದಾರೆ.
ಸರಳ ವಿವರಣೆ
ಆರನೆಯ ಅಧ್ಯಾಯದಲ್ಲಿ ಯೋಗಾಭ್ಯಾಸದ ಕ್ರಮ , ತನ್ನನ್ನು ತಾನು ಅರಿತುಕೊಳ್ಳುವ ಬಗೆ ಆತ್ಮಸಾಕ್ಷಾತ್ಕಾರಕ್ಕೆ ದಾರಿ, ಯೋಗಿಗಳಲ್ಲಿರುವ ನಾಲ್ಕು ವಿಧ, ಕೃಷ್ಣನ ಮೇಲಿನ ಭಕ್ತಿಯೋಗದ ಶ್ರೇಷ್ಠತೆ -ಇವುಗಳನ್ನು ಹೇಳಲಾಗಿದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ :- http://githa.koyil.org/index.php/githartha-sangraham-3/
ಆರ್ಕೈವ್ ಮಾಡಲಾಗಿದೆ – http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org