ಗೀತಾರ್ಥ ಸಂಗ್ರಹಮ್ – 7

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಗೀತಾರ್ಥ ಸಂಗ್ರಹಮ್

<< ಹಿಂದಿನ ಶೀರ್ಷಿಕೆ

ಜ್ಞಾನಿಯ ಶ್ರೇಷ್ಠತೆ

ಶ್ಲೋಕ – 29

ಜ್ಞಾನೀ ತು ಪರಮೈಕಾಂತೀ ತದಾಯತ್ತಾತ್ಮ ಜೀವನಃ ।
ತತ್ – ಸಂಶ್ಲೇಷ – ವಿಯೋಗೈಕ ಸುಕದುಕ್ಕಾಸ್ತಧೇಗಧೀಃ ॥

Nammazhwar
ನಮ್ಮಾೞ್ವಾರ್ – ಜ್ಞಾನಿಗಳಲ್ಲೇ ಶ್ರೇಷ್ಠವಾದವರು

ಕೇಳಿ

ಪದದಿಂದ ಪದಗಳ ಅರ್ಥ

ಪರಮೈಕಾಂತೀ ಜ್ಞಾನೀ ತು – ಭಗವಂತನಿಗೇ ಪೂರ್ತಿಯಾಗಿ ಭಕ್ತನಾಗಿರುವ ಜ್ಞಾನಿ
ತದಾ ಯತ್ತಾತ್ಮ ಜೀವನಃ – ಎಂಪೆರುಮಾನರ ಮೇಲೆಯೇ ಪೂರ್ತಿಯಾಗಿ ಅವಲಂಬಿಸಿರುವ ಜೀವನವನ್ನು ಹೊಂದಿದ್ದು
ತದೇಕಾಧೀಃ – ಅವರ ಪೂರ್ತಿ ಜ್ಞಾನವು ಭಗವಂತನಲ್ಲಿ ಮಾತ್ರ ಹೊಂದಿದ್ದು
ತತ್ – ಸಂಶ್ಲೇಷ – ವಿಯೋಗೈಕ ಸುಕದುಕ್ಕ – ಭಗವಂತನಲ್ಲಿ ಸೇರಿದಾಗ ಅತ್ಯಂತ ಸಂತೋಷಗೊಂಡು

ಸರಳ ವಿವರಣೆ

ಭಗವಂತನಿಗೇ ಪೂರ್ತಿ ಭಕ್ತನಾಗಿರುವುದು ಜ್ಞಾನಿ . ಅವರ ಜೀವನ ಪೂರ್ತಿ ಭಗವಂತನ ಮೇಲೆಯೇ ಅವಲಂಬಿಸಿರುತ್ತದೆ. ಅವನು ಭಗವಂತನಲ್ಲಿ ಸೇರಿದಾಗ ಅತ್ಯಂತ ಸಂತೋಷಗೊಂಡು ಮತ್ತು ಭಗವಂತನಿಂದ ದೂರವಾದಾಗ ದುಃಖಗೊಳ್ಳುತ್ತಾನೆ. ಅವನ ಜ್ಞಾನ (ಅರಿವು) ಪೂರಾ ಭಗವಂತನಲ್ಲಿ ಮಾತ್ರ ನಾಟಿರುತ್ತದೆ.


ಶ್ಲೋಕ – 30

ಭಗವತ್ ಧ್ಯಾನ ಯೋಗೋಕ್ತಿ ವಂದನ ಸ್ತುತಿ ಕೀರ್ತನೈಃ ।
ಲಬ್ಧಾತ್ಮಾ ತದ್ಗತಪ್ರಾಣ ಮನೋಬುದ್ಧೀಂದ್ರಿಯ ಕ್ರಿಯಃ ॥

nammalwar-art-2

ತಿರುವಾಯ್‍ಮೊೞಿ  6.7.1 ರಲ್ಲಿ ನಮ್ಮಾೞ್ವಾರರು ಘೋಷಿಸಿದ್ದಾರೆ –“ಉಣ್ಣುಮ್ ಸೋರು ಪರುಗು ನೀರ್ ತಿನ್ನುಮ್ ವೆಟ್ರಿಲೈಯುಮ್ ಎಲ್ಲಾಮ್ ಕಣ್ಣನ್” (ತಿನ್ನುವ ಆಹಾರ, ಕುಡಿಯುವ ನೀರು, ಅಡಿಕೆ ಬೀಜಗಳು – ಉಳಿಸಿಕೊಳ್ಳುವಿಕೆ, ಪೋಷಣೆ, ಮತ್ತು ಆನಂದ ಎಲ್ಲವೂ ಕೃಷ್ಣನೇ ಎಂದು ಹೇಳಿದ್ದಾರೆ).

ಕೇಳಿ

ಪದದಿಂದ ಪದಗಳ ಅರ್ಥ

ಭಗವತ್ ಧ್ಯಾನ ಯೋಗ ಉಕ್ತಿ ವಂದನ ಸ್ತುತಿ ಕೀರ್ತನೈಃ – ಭಗವಂತನನ್ನೇ ಧ್ಯಾನಿಸುವುದು (ಸ್ಮರಿಸುವುದು) , ನೋಡುವುದು, ಅವನ ಬಗ್ಗೆ ಮಾತನಾಡುವುದು, ಪೂಜಿಸುವುದು, ಹೊಗಳುವುದು, ಅವನ ಮೇಲೆಯೇ ಹಾಡುವುದು.
ಲಬ್ಧಾತ್ಮಾ – ಯಾರೊಬ್ಬರು ತಮ್ಮನ್ನು ತಾವು ಉಳಿಸಿಕೊಳ್ಳುವರೋ
ತತ್ ಗತ ಪ್ರಾಣ ಮನೋ ಬುದ್ಧಿ ಇಂದ್ರಿಯ ಕ್ರಿಯಃ – ಯಾರೊಬ್ಬರ ಜೀವನ. ಮನಸ್ಸು, ಬುದ್ಧಿ , ಇಂದ್ರಿಯಗಳು ಮತ್ತು ಕ್ರಿಯೆಗಳು ಭಗವಂತನ ಮೇಲೆಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವರೋ

ಸರಳ ವಿವರಣೆ

ಭಗವಂತನನ್ನು ಧ್ಯಾನಿಸುವುದು (ಸ್ಮರಿಸುವುದು), ನೋಡುವುದು, ಅವನ ಬಗ್ಗೆ ಮಾತನಾಡುವುದು, ಪೂಜಿಸುವುದು, ಹೊಗಳುವುದು, ಅವನ ಮೇಲೆ ಕೀರ್ತನೆಗಳನ್ನು ಹಾಡುವುದು – ಇವುಗಳ ಮೂಲಕ ಯಾರು ತನ್ನನ್ನು ತಾನು ಉಳಿಸಿಕೊಳ್ಳುವನೋ , ಅವನ ಜೀವನ, ಮನಸ್ಸು, ಬುದ್ಧಿ, ಇಂದ್ರಿಯಗಳು ಭಗವಂತನಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು.

ಶ್ಲೋಕ – 31

ನಿಜ ಕರ್ಮಾದಿ ಭಕ್ತ್ಯಾನ್ತಮ್ ಕುರ್ಯಾತ್ ಪ್ರೀತ್ಸೈವ ಕಾರಿತಃ ।
ಉಪಾಯತಾಮ್ ಪರಿತ್ಯಜ್ಯ ನ್ಯಸ್ಯೇದ್ಧೇವೇ ತು ತಾಮಭೀಃ ॥

emperumanar-1

ಎಂಬೆರುಮಾನಾರರು –  ಉತ್ತಮವಾದ ಜ್ಞಾನಿ

ಕೇಳಿ

ಪದದಿಂದ ಪದಗಳ ಅರ್ಥ

ನಿಜ ಕರ್ಮಾದಿ – ಕರ್ಮಯೋಗದಿಂದ ಪ್ರಾರಂಭಿಸಿ (ಅವರವರ ವರ್ಣ ಮತ್ತು ಆಶ್ರಮಕ್ಕನುಗುಣವಾಗಿ)
ಭಕ್ತಿ ಅಂತಮ್ – ಭಕ್ತಿಯೋಗದವರೆಗಿನ ಎಲ್ಲಾ ದಾರಿಗಳೂ
ಉಪಾಯತಾಮ್ ಪರಿತ್ಯಜ್ಯ – ಭಗವಂತನನ್ನು ಪದೆಯಲು ತಮ್ಮ ಮನೋಭಾವದ ದಾರಿಯನ್ನು ಬಿಟ್ಟು
ಪ್ರೀತ್ಯಾ ಏವಕಾರಿತಃ – ಭಕ್ತಿಯಿಂದ ಭಗವಂತನನ್ನು ಪ್ರಚೋದಿಸಿದಾಗ (ಎಲ್ಲರಿಗೂ ಸಹಜವಾದ ನಾಯಕನಾದ ಭಗವಂತನಿಗೆ ಅದೇ ಸೂಕ್ತವಾದುದು)
ಕುರ್‍ಯಾತ್ – (ಪರಮೈಕಾಂತಿಯಾದ ಜ್ಞಾನಿ – ಯಾರು ಭಗವಂತನಲ್ಲಿ ಪರಿಪೂರ್ಣವಾಗಿ ಮನಸ್ಸಿಟ್ಟಿರುತ್ತಾರೋ) ಅವರು ಮಾಡುವ ಕ್ರಿಯೆ
ಅಭೀಃ – ಭಯವಿಲ್ಲದೆ
ತಾಮ – ಉಪಾಯತ್ವಮ್ (ದಾರಿಯಾಗಿರುವುದು)
ದೇವೇ ತು – ಭಗವಂತನಲ್ಲಿ ಮಾತ್ರ
ನ್ಯಾಸ್ಯೇತ್ – ಧ್ಯಾನಿಸಲ್ಪಡಬೇಕಾದ

ಸರಳ ವಿವರಣೆ

ಪರಮೈಕಾಂತಿಯಾದ ಜ್ಞಾನಿ (ಭಗವಂತನಲ್ಲೇ ಸಂಪೂರ್ಣವಾಗಿ ಮುಳುಗಿರುವ) ಭಕ್ತಿಯಿಂದ ಭಗವಂತನನ್ನು ಪ್ರಚೋದಿಸಿದಾಗ (ಸಹಜವಾಗಿ ಎಲ್ಲರಿಗೂ ನಾಯಕನಾಗಿರುವ ಭಗವಂತನಿಗೆ ಇದೇ ಸೂಕ್ತವಾದುದು) . ಅವನು ಕರ್ಮಯೋಗದಿಂದ ಪ್ರಾರಂಭಿಸಿ , ಭಕ್ತಿಯೋಗದವರೆಗೂ ಎಲ್ಲಾ ಮಾರ್ಗಗಳನ್ನೂ ಅನುಸರಿಸಿ, ತನ್ನ ವರ್ಣ ಮತ್ತು ಆಶ್ರಮಕ್ಕೆ ಅನುಗುಣವಾಗಿ , ಈ ಎಲ್ಲಾ ಯೋಗಗಳೂ, ಮಾರ್ಗಗಳೂ ಭಗವಂತನನ್ನು ಹೊಂದಲು ಮಾರ್ಗವಾಗಿದೆ ಎಂಬ ಮನೋಭಾವವನ್ನು ತ್ಯಜಿಸಿರುತ್ತಾನೆ. ಆ ಉಪಾಯತ್ವಮ್ (ಭಗವಂತನನ್ನು ಪಡೆಯುವ ದಾರಿ) ಭಯವನ್ನು ಬಿಟ್ಟು , ಭಗವಂತನನ್ನು ಮಾತ್ರ ಧ್ಯಾನಿಸುವುದೇ ಆಗಿರುತ್ತದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ :- http://githa.koyil.org/index.php/githartha-sangraham-7/

ಆರ್ಕೈವ್ ಮಾಡಲಾಗಿದೆ –  http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org