ಗೀತಾರ್ಥ ಸಂಗ್ರಹಮ್ – 8

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಗೀತಾರ್ಥ ಸಂಗ್ರಹಮ್

<< ಹಿಂದಿನ ಶೀರ್ಷಿಕೆ

ಮುಕ್ತಾಯ

ಶ್ಲೋಕ – 32

ಏಕಾಂತಾತ್ಯಂತ ದಾಸ್ಯೈಕರತಿಸ್ ತತ್ ಪದಮಾಪ್ನುಯಾತ್।
ತತ್ ಪ್ರಧಾನಮಿದಮ್ ಶಾಸ್ತ್ರಮಿತಿ ಗೀತಾರ್ಥಸಂಗ್ರಹಃ ॥

paramapadhanathan

ಪರಮಪದಮ್ – ಶ್ರೀಮನ್ನಾರಾಯಣರ ದಿವ್ಯ ವಾಸಸ್ಥಾನ – ಅಂತ್ಯವಾಗಿ ಸೇರಬೇಕಾದ ಸ್ಥಳ

ಕೇಳಿ

ಪದದಿಂದ ಪದಗಳ ಅರ್ಥ

ಏಕಾಂತ ಅತ್ಯಂತ ದಾಸ್ಯೈಕರತಿಃ – ಎಂಪೆರುಮಾನರ ಸಂತೋಷಕ್ಕಾಗಿ ಸೇವಕತ್ವವನ್ನು ಇಚ್ಛಿಸುವವನು ಪರಮೈಕಾಂತಿ
ತತ್‍ಪದಮ್ – ಎಂಪೆರುಮಾನರ ಪಾದಕಮಲಗಳು
ಆಪ್ನುಯಾತ್ – ತಲುಪುವರು
ಇದಮ್ ಶಾಸ್ತ್ರಮ್ – ಈ ಗೀತಾ ಸಂಗ್ರಹಮ್
ತತ್ ಪ್ರಧಾನಮ್ – ಜೀವಾತ್ಮನನ್ನು ಪರಮೈಕಾಂತಿಯನ್ನಾಗಿ ಪರಿವರ್ತನೆ ಮಾಡಲು ಮುಖ್ಯ ಉದ್ದೇಶವನ್ನು ಹೊಂದಿ
ಇತಿ – ಈ ರೀತಿಯಲ್ಲಿ
ಗೀತಾರ್ಥ ಸಂಗ್ರಹಃ – ಭಗವದ್ಗೀತೆಯ ಅರ್ಥಗಳನ್ನು ಸಂಕ್ಷಿಪ್ತಗೊಳಿಸಿ ವಿವರಿಸಿರುವ ‘ಗೀತಾರ್ಥ ಸಂಗ್ರಹಮ್’ ಮುಕ್ತಾಯವಾಗುತ್ತದೆ.

ಸರಳ ವಿವರಣೆ

ಎಂಪೆರುಮಾನರ ಸಂತೋಷಕ್ಕಾಗಿ , ಎಂಪೆರುಮಾನರಿಗೆ ಸೇವೆಯನ್ನು ಸಲ್ಲಿಸಲು ಆಸೆ ಪಡುವವನು ಪರಮೈಕಾಂತಿ. ಅವನು ಎಂಪೆರುಮಾನರ ಪಾದಕಮಲಗಳನ್ನು ಅವರಿಗೆ ಸೇವೆ ಸಲ್ಲಿಸಲು ತಲುಪುವನು. ಜೀವಾತ್ಮನನ್ನು ಈ ರೀತಿಯಲ್ಲಿ ಪರಮೈಕಾಂತಿಯನ್ನಾಗಿ ಪರಿವರ್ತನೆ ಮಾಡಲು ಮುಖ್ಯ ಉದ್ದೇಶವನ್ನು ಹೊಂದಿರುವ ಭಗವದ್ಗೀತೆಯ ಅರ್ಥಗಳನ್ನು ಸಂಕ್ಷಿಪ್ತವಾಗಿ ವಿವರಿಸಿರುವ ‘ಗೀತಾರ್ಥ ಸಂಗ್ರಹಮ್ ‘ ಪರಿಪೂರ್ಣವಾಗುತ್ತದೆ.

ಆಳವಂದಾರ್ ರವರು ರಚಿಸಿರುವ ಗೀತಾರ್ಥ ಸಂಗ್ರಹಮ್‍ನ ಕನ್ನಡ ಅನುವಾದ ಮುಕ್ತಾಯವಾಗುತ್ತದೆ.
ಆೞ್ವಾರ್ ತಿರುವಡಿಗಳೇ ಶರಣಮ್
ಆಳವಂದಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ :- http://githa.koyil.org/index.php/githartha-sangraham-8/

ಆರ್ಕೈವ್ ಮಾಡಲಾಗಿದೆ –  http://githa.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org