ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಗೀತಾರ್ಥ ಸಂಗಮಮ್ ಆಡಿಯೋ ರೆಕಾರ್ಡಿಂಗ್ಸ್
ಇ- ಪುಸ್ತಕ
ಮೊದಲ್ನುಡಿ
ಯತ್ ಪದಾಂಭೋರುಹಧ್ಯಾನ ವಿದ್ವಸ್ಥಾಶೇಷ ಕಲ್ಮಶಃ ।
ವಸ್ತುತಾಮುಪಯಾ ದೋಹಮ್ ಯಾಮುನೇಯಮ್ ನಮಾಮಿತಂ ॥
ಯಾರ ಕರುಣೆಯಿಂದ ನನ್ನ ನ್ಯೂನ್ಯತೆಗಳೆಲ್ಲಾ ಬಿಟ್ಟು ಹೋದವೋ ಮತ್ತು ನಾನು ಒಂದು ಗುರುತಿಸುವ ವಸ್ತುವಾದೆನೋ (ಮುಂದು ನಾನು ಒಂದು ಅಸತ್ (ಜೀವವಿಲ್ಲದ ವಸ್ತು) ಆದರೆ ಈಗ ನಾನು ನನ್ನಲ್ಲಿ ಆತ್ಮವಿರುವುದನ್ನು ಮನಗಂಡಿದ್ದೇನೆ.) ಅಂತಹ ಯಾಮುನಾಚಾರ್‍ಯರ ದಿವ್ಯ ಪಾದಕಮಲಗಳನ್ನು ನಾನು ಧ್ಯಾನಿಸುತ್ತೇನೆ.
– ಯಾಮುನಾಚಾರ್ಯರನ್ನು ವೈಭವೀಕರಿಸಿ ರಾಮಾನುಜರು ಹಾಡಿದ ಆಹ್ವಾನಿತ ಶ್ಲೋಕ
ಆಳವಂದಾರ್ (ಯಾಮುನಾಚಾರ್‍ಯರು) , ಶ್ರೀಮನ್ ನಾಥಮುನಿಗಳ ಮೊಮ್ಮಗರಾದವರು. ಅವರು ವೇದ ವೇದಾಂತಗಳು ಮುಂತಾದವುಗಳಲ್ಲಿ ವಿದ್ವಾಂಸರಾಗಿದ್ದರು. ಅವರು ತಮ್ಮ ಅನೇಕ ಗ್ರಂಥಗಳಿಂದ ಶ್ರೀವೈಷ್ಣವ ಸತ್ ಸಂಪ್ರದಾಯಗಳನ್ನು ದೀರ್ಘವಾಗಿ ವಿವರಿಸಿ ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಅದರಲ್ಲಿ ಒಂದು ಮುಖ್ಯವಾದ ಗ್ರಂಥವೆಂದರೆ ಅದೇ ಗೀತಾರ್ಥ ಸಂಗ್ರಹಮ್.
ಗೀತಾರ್ಥ ಸಂಗ್ರಹಮ್ ಒಂದು ಸಂಸ್ಕೃತ ಸ್ತೋತ್ರ ಪ್ರಬಂಧವಾಗಿದ್ದು, ಭಗವದ್ಗೀತೆಯ ಸಾರಾಂಶವನ್ನೆಲ್ಲಾ 32 ಶ್ಲೋಕಗಳಿಂದ ವಿವರಿಸಲಾಗಿದೆ. ಈ 32 ಶ್ಲೋಕಗಳನ್ನು ಈ ಕೆಳಗಿನ ವಿಷಯಗಳನ್ನಾಗಿ ವಿಂಗಡಿಸಲಾಗಿದೆ. :-
1. ಗೀತಾ ಶಾಸ್ತ್ರಮ್‍ನ ಉದ್ದೇಶ – ಶ್ಲೋಕಮ್ 1
2. ಒಂದೊಂದು ಷಟಕಮ್ (6 ಅಧ್ಯಾಯಗಳು) ನ ಸಾರಾಂಶ – ಶ್ಲೋಕಮ್ 2 ರಿಂದ 4
3. ಒಂದೊಂದು ಅಧ್ಯಾಯದ ಸಾರಾಂಶಗಳು – ಶ್ಲೋಕಮ್ 5 ರಿಂದ 22
• ಮೊದಲ 6 ಅಧ್ಯಾಯಗಳ ತಾತ್ಪರ್‍ಯ
• ಎರಡನೆಯ 6 ಅಧ್ಯಾಯಗಳ ತಾತ್ಪರ್‍ಯ
• ಕೊನೆಯ 6 ಅಧ್ಯಾಯಗಳ ತಾತ್ಪರ್‍ಯ
4. ಕರ್ಮ, ಜ್ಞಾನ, ಭಕ್ತಿ ಯೋಗಗಳ ವಿವರಣೆ – ಶ್ಲೋಕಮ್ 23 ರಿಂದ 28
5. ಜ್ಞಾನಿಯ ಶ್ರೇಷ್ಠತೆ – ಶ್ಲೋಕಮ್ 29 ರಿಂದ 31
6. ಮುಕ್ತಾಯ – ಶ್ಲೋಕ 32
ಪುತ್ತೂರ್ “ಸುದರ್ಶನಾರ್” ಶ್ರೀ ಉ. ವೇ. ಕೃಷ್ಣಸ್ವಾಮಿ ಅಯಂಗಾರ್ ಸ್ವಾಮಿಗಳು ಈ ಶ್ಲೋಕಗಳಿಗೆ ಪದಗಳ ಅರ್ಥಗಳನ್ನು ತಮಿಳಿನಲ್ಲಿ ಬರೆದಿರುತ್ತಾರೆ. ಅದರ ಸಹಾಯದಿಂದ ಬರೆದ ಕನ್ನಡ ಅರ್ಥವನ್ನು ನಾವು ಈಗ ಈ ಪ್ರಬಂಧದ ಪ್ರತಿಯೊಂದು ವಿಭಾಗಗಳಿಗೆ ಪರಿಶೀಲಿಸೋಣ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : http://githa.koyil.org/index.php/githartha-sangraham/
ಆರ್ಕೈವ್ ಮಾಡಲಾಗಿದೆ – http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org