ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಕರ್ಮ ಜ್ಞಾನ ಭಕ್ತಿಯೋಗಗಳ ವಿವರಣೆ
ಶ್ಲೋಕಮ್ – 23
ಕರ್ಮಯೋಗಸ್ತಪಸ್ತೀರ್ಥದಾನಯಜ್ಞಾದಿಸೇವನಮ್।
ಜ್ಞಾನಯೋಗೋಜಿತಸ್ವಾಂತೈಃ ಪರಿಶುದ್ಧಾತ್ಮನಿ ಸ್ಥಿತಿಃ॥
ಪದದಿಂದ ಪದಗಳ ಅರ್ಥ
ಕರ್ಮಯೋಗಃ – ಕರ್ಮಯೋಗವು
ತಪಸ್ ತೀರ್ಥ ದಾನ ಯಜ್ಞಾದಿ ಸೇವನಮ್ – ತಪಸ್ಸು, ತೀರ್ಥಯಾತ್ರೆ, ದಾನ, ಯಜ್ಞ ಯಾಗ ಮುಂತಾದುವುಗಳಲ್ಲಿ ಸದಾ ಮುಳುಗಿರುವುದು
ಜ್ಞಾನಯೋಗಃ – ಜ್ಞಾನಯೋಗವು
ಜಿತಸ್ವಾಂತೈಃ – ತನ್ನ ಮನಸ್ಸಿನ ಮೇಲೆ ತಾನು ವಿಜಯ ಸಾಧಿಸಿದವನು
ಪರಿಶುದ್ಧಾತ್ಮನಿ ಸ್ಥಿತಿಃ – ಆತ್ಮದಲ್ಲೇ ಪೂರ್ತಿಯಾಗಿ ಮನಸ್ಸನ್ನು ಹೊಂದಿ , ಅದು ಲೌಕಿಕ ಶರೀರಕ್ಕೆ ಸಂಬಂಧವಿಲ್ಲವೆಂದು ತಿಳಿದು
ಸರಳ ವಿವರಣೆ
ಕರ್ಮಯೋಗವು ತಪಸ್ಸು, ತೀರ್ಥಯಾತ್ರೆ, ದಾನ, ಯಜ್ಞ ಮುಂತಾದುವುಗಳಲ್ಲಿ ಸದಾ ಮುಳುಗಿರುವುದು. ಜ್ಞಾನಯೋಗವು ತನ್ನ ಬುದ್ಧಿಯ ಮೇಲೆ ತಾನು ವಿಜಯ ಸಾಧಿಸಿದವನು ಅಭ್ಯಾಸಿಸುವುದು ಮತ್ತು ಪೂರ್ತಿಯಾಗಿ ಮನಸ್ಸನ್ನು ಆತ್ಮದಲ್ಲೇ ಹೊಂದಿ ಅದು ಲೌಕಿಕ ಶರೀರಕ್ಕೆ ಸಂಬಂಧವಿಲ್ಲವೆಂದು ತಿಳಿದಿರುವುದು.
ಶ್ಲೋಕ – 24
ಭಕ್ತಿಯೋಗಃ ಪರೈಕಾಂತಪ್ರೀತ್ಯ ಧ್ಯಾನಾದಿಶು ಸ್ಥಿತಿಃ ।
ತ್ರಯಾಣಾಮಪಿ ಯೋಗಾನಾಮ್ ತ್ರಿಭಿಃ ಅನ್ಯೋನ್ಯ ಸಂಗಮಃ॥
ಪದದಿಂದ ಪದಗಳ ಅರ್ಥ
ಭಕ್ತಿಯೋಗಃ – ಭಕ್ತಿಯೋಗವು
ಪರೈಕಾಂತಪ್ರೀತ್ಯ – ಪರಮಾತ್ಮನಾದ ಶ್ರೀಮನ್ನಾರಾಯಣರ ಮೇಲಿನ ಪ್ರೀತಿ
ಧ್ಯಾನಾದಿಶು ಸ್ಥಿತಿಃ – ಅವನನ್ನೇ ಪೂರ್ತಿ ಸ್ಮರಿಸುತ್ತಾ, ಪೂಜಿಸುತ್ತಾ, ನಮಸ್ಕರಿಸುತ್ತಾ ಮುಂತಾದುವುಗಳು
ತ್ರಯಾಣಾಮಪಿ ಯೋಗಾನಾಂ- ಈ ಮೂರು ಯೋಗಗಳು, ಅವು ಕರ್ಮ,ಜ್ಞಾನ, ಮತ್ತು ಭಕ್ತಿ
ಅನ್ಯೋನ್ಯ ಸಂಗಮಃ – ಪ್ರತಿಯೊಂದು ಯೋಗದಲ್ಲಿಯೂ ಅನ್ಯ ಎರಡು ಯೋಗಗಳು ಅಂತರ್ಗತವಾಗಿ ಮಿಲನವಾಗಿರುವುದು
ಸರಳ ವಿವರಣೆ
ಭಕ್ತಿಯೋಗವೆನ್ನುವುದು ಪರಮಾತ್ಮ ಶ್ರೀಮನ್ನಾರಾಯಣರ ಮೇಲೆ ಪ್ರೀತಿಯಿಂದ ಇರುವುದು ಮತ್ತು ಪೂರ್ತಿಯಾಗಿ ಅವನನ್ನೇ ಮನಸ್ಸಿನಲ್ಲಿ ಸ್ಥಾಪಿಸಿ ಧ್ಯಾನಿಸುವುದು, ಪೂಜಿಸುವುದು, ನಮಸ್ಕಾರಗಳನ್ನು ಸಮರ್ಪಿಸುವುದು ಮುಂತಾದುವುಗಳು. ಪ್ರತಿಯೊಂದು ವಿಧದ ಯೋಗದಲ್ಲಿ (ಕರ್ಮ, ಜ್ಞಾನ ಮತ್ತು ಭಕ್ತಿ) , ಮಿಕ್ಕ ಎರಡು ಯೋಗಗಳು ಅಂತರ್ಗತವಾಗಿ ಮಿಲನವಾಗಿರುತ್ತದೆ.
ಶ್ಲೋಕ – 25
ನಿತ್ಯ ನೈಮಿತ್ತಿಕಾನಾಮ್ ಪರಾರಾಧನ ರೂಪಿಣಾಮ್ ।
ಆತ್ಮದೃಷ್ಟೇಸ್ ತ್ರಯೋಪ್ಯೇತೇ ಯೋಗದ್ವಾರೇಣ ಸಾಧಕಾಃ ॥
ಪದದಿಂದ ಪದಗಳ ಅರ್ಥ
ಪರಾರಾಧನ ರೂಪಿಣಾಮ್ – ಪರಮ ಪುರುಷನ ರೂಪದಲ್ಲಿರುವ ಶ್ರೀಮನ್ನಾರಾಯಣರ ಪೂಜೆಯನ್ನು ಮಾಡುವುದು
ನಿತ್ಯ ನೈಮಿತ್ತಿಕಾಣಾಮ್ ಚ – ನಿತ್ಯಕರ್ಮ ಮತ್ತು ನೈಮಿತ್ತಿಕ ಕರ್ಮ (ಹಿಂದಿನ ಶ್ಲೋಕದಲ್ಲಿ ಹೇಳಿರುವಂತೆ ತ್ರಿಭಿಃ ಸಂಗಮಃ)
ಏತ ತ್ರಯ ಅಪಿಃ – ಈ ಮೂರೂ ಯೋಗಗಳು
ಯೋಗ ದ್ವಾರೇಣ – ಸಮಾಧಿ ಸ್ಥಿತಿಗೆ ತಲುಪಲು (ಸಂಪೂರ್ಣ ಶಾಂತಿ , ಮನಸ್ಸಿನ ಕೇಂದ್ರೀಕರಣ ಮತ್ತು ಪೂರ್ತಿ ಹಿಡಿತ)ಆತ್ಮ ದೃಷ್ಟೇಃ – ಆತ್ಮ ಸಾಕ್ಷಾತ್ಕಾರಕ್ಕಾಗಿ (ನಮ್ಮನ್ನು ನಾವು ಅರಿಯಲು)
ಸಾಧಕಃ – ಇವುಗಳು ಮಾರ್ಗಗಳಾಗಿವೆ
ಸರಳ ವಿವರಣೆ
ಪರಮಪುರುಷನನ್ನು (ಶ್ರೀಮನ್ನಾರಾಯಣರನ್ನು ) ಪೂಜಿಸುವುದು, ನಿತ್ಯಕರ್ಮ ಮತ್ತು ನೈಮಿತ್ತಿಕ ಕರ್ಮ (ಮೂರು ಯೋಗಗಳು) , ಇವುಗಳು ಆತ್ಮಸಾಕ್ಷಾತ್ಕಾರಮ್ (ತನ್ನನ್ನು ತಾನು ಅರಿಯಲು) , ಸಮಾಧಿ ಸ್ಥಿತಿಗೆ ತಲುಪಲು (ಸಂಪೂರ್ಣ ಶಾಂತಿ , ಮನಸ್ಸಿನ ಕೇಂದ್ರೀಕರಣ ಮತ್ತು ಪೂರ್ತಿ ಹಿಡಿತಕ್ಕೆ ) ಮಾರ್ಗಗಳಾಗಿವೆ.
ಶ್ಲೋಕ – 26
ನಿರಸ್ತ ನಿಖಿಲಾಜ್ಞಾನೋ ದೃಷ್ಟ್ವಾತ್ಮಾನಮ್ ಪರಾನುಗಮ್।
ಪ್ರತಿಲಭ್ಯ ಪರಾಮ್ ಭಕ್ತಿಮ್ ತಯೈವಾಪ್ನೋತಿ ತತ್ಪದಮ್॥
ಪದದಿಂದ ಪದಗಳ ಅರ್ಥ
ನಿರಸ್ತ ನಿಖಿಲ ಅಜ್ಞಾನೋ – ಎಲ್ಲಾ ರೀತಿಯ ಅಜ್ಞಾನದಿಂದ ಬಿಡುಗಡೆ (ಮಾರ್ಗವನ್ನು ಅನುಸರಿಸಲು ತೊಂದರೆಯಾಗಿರುವ)
ಪರಾನುಗಮ್ – ಪರಮಪುರುಷನಿಗೆ (ಶ್ರೀಮನ್ನಾರಾಯಣರಿಗೆ ) ಸೇವಕನಾಗಿರುವುದು
ಆತ್ಮಾನಮ್ – ಯಾರೊಬ್ಬರ ಅಂತರ್ಗತ ಸ್ವಭಾವ
ದೃಷ್ಟ್ವಾ – ಅವಲೋಕಿಸಿದಾಗ
ಪರಾಮ್ ಭಕ್ತಿಮ್ – ಶುದ್ಧವಾದ ಭಕ್ತಿ
ಪ್ರತಿಲಭ್ಯ – ಹೊಂದುವುದು
ತಯಾ ಏವ – ಆ ಶುದ್ಧವಾದ ಭಕ್ತಿಯ ಮೂಲಕ
ತತ್ ಪದಮ್ – ಎಂಪೆರುಮಾನರ ಪಾದ ಕಮಲಗಳು
ಆಪ್ನೋತಿ – ತಲುಪುವುದು
ಸರಳ ವಿವರಣೆ
ಜೀವಾತ್ಮವು ತನ್ನ ಎಲ್ಲಾ ಅಜ್ಞಾನಗಳಿಂದ (ಮಾರ್ಗವನ್ನು ಅನುಸರಿಸಲು ತೊಂದರೆಯಾಗಿರುವ) ಬಿಡಿಸಿಕೊಂಡು ಮತ್ತು ತನ್ನನ್ನು ತಾನು ಅವಲೋಕಿಸಿಕೊಂಡಾಗ , ತನ್ನ ಅಂತರ್ಗತ ಸ್ವಭಾವ ಪರಮಪುರುಷನ (ಶ್ರೀಮನ್ನಾರಾಯಣರ) ಸೇವಕನಾಗಿರುವುದು ಮನಗಂಡಾಗ ಅವನು ಶುದ್ಧವಾದ ಭಕ್ತಿಯನ್ನು ಹೊಂದುತ್ತಾನೆ ಮತ್ತು ಆ ಭಕ್ತಿಯ ಮೂಲಕ ಎಂಪೆರುಮಾನರ ಪಾದಕಮಲಗಳನ್ನು ಸೇರುತ್ತಾನೆ.
ಶ್ಲೋಕ – 27
ಭಕ್ತಿಯೋಗಸ್ ತದಾರ್ಥೀ ಚೇತ್ ಸಮಗ್ರೈಶ್ವರ್‍ಯ ಸಾಧಕಃ ।
ಆತ್ಮಾರ್ಥೀ ಚೇತ್ ತ್ರಯೋಪ್ಯೇತೇ ತತ್‍ಕೈವಲ್ಯಸ್ಯ ಸಾಧಕಾಃ ॥
ಪದದಿಂದ ಪದಗಳ ಅರ್ಥ
ಭಕ್ತಿಯೋಗಃ – ಭಕ್ತಿಯೋಗ
ತದಾರ್ಥೀ ಚೇತ್ – ಅತ್ಯಂತ ಸಂಪತ್ತಿಗಾಗಿ ಆಸೆ ಪಡುವವನು
ಸಮಗ್ರೈಶ್ವರ್‍ಯ ಸಾಧಕಃ – ಅವನಿಗೆ ಸಂಪತ್ತು ಕೊಡಲಾಗುವುದು
ಏತೇ ತ್ರಯಃ ಅಪಿ – ಈ ಎಲ್ಲಾ ಮೂರು ಯೋಗಗಳು
ಆತ್ಮಾರ್ಥೀ ಚೇತ್ – ತನ್ನ ಆತ್ಮವನ್ನು ತಾನು ಸಂತೋಷಪಡಲು ಇಚ್ಛಿಸಿದರೆ
ತತ್ ಕೈವಲ್ಯಸ್ಯ ಸಾಧಕಾಃ – ಆತ್ಮ ಸಂತೋಷವಾದ ಕೈವಲ್ಯ ಮೋಕ್ಷವನ್ನು ಕೊಡಲಾಗುವುದು
ಸರಳ ವಿವರಣೆ
ಯಾರೊಬ್ಬರು ಅತೀ ಸಂಪತ್ತಿಗಾಗಿ ಆಸೆ ಪಟ್ಟರೆ, ಭಕ್ತಿಯೋಗವು ಸಂಪತ್ತನ್ನು ಕೊಡುವುದು. ಈ ಎಲ್ಲಾ ಮೂರು ಯೋಗಗಳು ತನ್ನನ್ನು ತಾನು ಸಂತೋಷ ಪಡಲು ಇಚ್ಛಿಸಿದರೆ ಕೈವಲ್ಯಮೋಕ್ಷವನ್ನು ಕೊಡುವುದು.
ಶ್ಲೋಕ – 28
ಐಕಾಂತ್ಯಮ್ ಭಗವತ್ಯೇಷಾಮ್ ಸಮಾನಮಧಿಕಾರಣಾಮ್।
ಯಾವತ್ಪ್ರಾಪ್ತಿ ಪರಾರ್ಥೀ ಚೇತ್ ತದೇವಾತ್ಯಂತಮಶ್ನುತೇ॥
ಪದದಿಂದ ಪದಗಳ ಅರ್ಥ
ಏಶಾಮ್ ಅಧಿಕಾರಿಣಾಮ್ – ಈ ಎಲ್ಲಾ ಮೂರು ವಿಧವಾದ ಅರ್ಹ ಜನಗಳಿಗೆ (ಮೂರು ವಿಧದ ಯೋಗಗಳಲ್ಲಿ ವ್ಯಸ್ತರಾಗಿರುವ)
ಭಗವತಿ – ಭಗವಂತನಲ್ಲಿ
ಐಕಾಂತ್ಯಮ್ – ಭಗವಂತನಲ್ಲಿ ಮಾತ್ರ ಭಕ್ತಿ ಹೊಂದಿರುವುದು ಇನ್ನೆಲ್ಲಾ ದೇವತೆಗಳನ್ನು ಬಿಟ್ಟು
ಸಮಾನಮ್ – ಸಾಧಾರಣ
ಯಾವತ್ಪ್ರಾಪ್ತಿ – ಫಲಿತಾಂಶವನ್ನು ಹೊಂದಲು ಮುಂದೆಯೇ
ಪರಾರ್ಥೀ ಚೇತ್ – ಪರಮಪುರುಷ (ಶ್ರೀಮನ್ನಾರಾಯಣರ) ಪಾದಕಮಲಗಳನ್ನು ಸೇರಬಯಸಿದರೆ
ತತ್ ಏವ – ಆ ಪಾದಕಮಲಗಳೇ
ಅತ್ಯಂತಂ – ಯಾವಾಗಲೂ
ಅಶ್ನುತೇ – ಹೊಂದುತ್ತಾನೆ (ಭಕ್ತಿಯೋಗದಿಂದ ಉಪಾಸಕ ಜ್ಞಾನಿಯು ಕೊನೆಯವರೆಗೆ ಸಾಧಿಸಿದರೆ , ಎಂಪೆರುಮಾನರ ಪಾದಕಮಲಗಳನ್ನು ಪಡೆಯುತ್ತಾನೆ)
ಸರಳ ವಿವರಣೆ
ಅನ್ಯದೇವತೆಗಳನ್ನು ಬಿಟ್ಟು ಭಗವಂತನಲ್ಲಿ ಮಾತ್ರ ಭಕ್ತಿಯನ್ನು ಹೊಂದಿರುವುದು – ಇದು ಮೂರು ರೀತಿಯ ಅರ್ಹತೆಯುಳ್ಳ ಜನಗಳಿಗೆ ಇರುವ ಸಾಮಾನ್ಯವಾದ ವಿಷಯ (ಮೂರು ರೀತಿಯ ಯೋಗಗಳಲ್ಲಿ ವ್ಯಸ್ತವಾಗಿರುವುದು) .ತಮ್ಮ ಆಸೆಯ ಪ್ರಕಾರ ಸಂಪತ್ತು ಮತ್ತು ಆತ್ಮಸಂತೋಷವನ್ನು ಹೊಂದುವ ಮೊದಲೇ , ತಮ್ಮ ಮನಸ್ಸನ್ನು ಬದಲಾಯಿಸಿ ಅವರು ಪರಮಪುರುಷನ (ಶ್ರೀಮನ್ನಾರಾಯಣರ) ಪಾದಕಮಲಗಳನ್ನು ಸೇರ ಬಯಸಿದರೆ, ಅವರು ಆ ಪಾದಕಮಲಗಳನ್ನೇ ಸೇರುತ್ತಾರೆ. (ಭಕ್ತಿಯೋಗವನ್ನು ಅಭ್ಯಾಸಿಸುವ ಉಪಾಸಕ ಜ್ಞಾನಿಯು ಕೊನೆಯವರೆಗೆ ಸಾಧನೆಯನ್ನು ಮಾಡಿದರೆ , ಎಂಪೆರುಮಾನರ ದಿವ್ಯ ಪಾದಕಮಲವನ್ನೇ ಸೇರುತ್ತಾನೆ ಎಂಬುದನ್ನು ಗಮನಿಸಬೇಕು.)
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : http://githa.koyil.org/index.php/githartha-sangraham-6/
ಆರ್ಕೈವ್ ಮಾಡಲಾಗಿದೆ – http://githa.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org